ಇತ್ತೀಚಿನ ಸುದ್ದಿ
Travel Expo | ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋದ 2ನೇ ಆವೃತ್ತಿಗೆ ನಮ್ಮ ಬೆಂಗಳೂರು ಸಜ್ಜು
26/02/2025, 22:36

ಬೆಂಗಳೂರು(reporterkarnataka.com): ಕರ್ನಾಟಕ ಇಂಟರ್ನ್ಯಾಶನಲ್ ಟ್ರಾವೆಲ್ ಎಕ್ಸ್ಪೋ ದ ಎರಡನೇ ಆವೃತ್ತಿಗೆ ನಮ್ಮ ಬೆಂಗಳೂರು ಸಜ್ಜಾಗಿದೆ. ಮೂರು ದಿನಗಳ ಈ ಎಕ್ಸ್ ಪೋ ನಗರದ ತಾಜ್ ಎಂಡ್ ಹೋಟೆಲ್ ನಲ್ಲಿ ಬುಧವಾರ ಉದ್ಘಾಟನೆಗೊಂಡಿತು. ಮೊದಲ ಆವೃತ್ತಿಯ ಅದ್ಭುತ ಯಶಸ್ಸಿನ ಬಳಿಕ ಈ ಎಕ್ಸ್ ಪೋ ತನ್ನ ಎರಡನೇ ಆವೃತ್ತಿಯೊಂದಿಗೆ ಮರಳಿದೆ. ಪ್ರವಾಸೋದ್ಯಮ ಹಾಗು ಸಾರಿಗೆ ಕುರಿತ ಈ ಮೂರೂ ದಿನಗಳ ಸಮ್ಮೇಳನ 26ರಿಂದ 28ರವರೆಗೆ ನಡೆಯಲಿದೆ. ಈ ಎಕ್ಸ್ ಪೋ ಕರ್ನಾಟಕವನ್ನು ವಿಶ್ವದ ಪ್ರವಾಸೋದ್ಯಮ ಕ್ಷೇತ್ರದ ಕೇಂದ್ರವಾಗಿ, ಈ ನೆಲದ ಪ್ರವಾಸಿ ತಾಣಗಳನ್ನೂ ಹೊರಜಗತ್ತಿಗೆ ಪರಿಚಯಿಸಲಿದೆ.
ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ, ಮತ್ತು ‘ಕರ್ನಾಟಕ ಟೂರಿಸಂ ಸೊಸೈಟಿ’ ಆಯೋಜಿಸಿರುವ ಕೆಐಟಿಇ 2025, ದೇಶ-ವಿದೇಶಗಳ ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಕಾರ್ಯಕ್ರಮವಾಗಿ. ಈ ಎಕ್ಸ್ ಪೋ ಪ್ರವಾಸೋದ್ಯಮ, ಅತಿಥ್ಯ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ಹೊಸ ಪಾಲುದಾರಿಕೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ವ್ಯಾಪಾರ ಹಾಗು ಉದ್ಯಮ ವಿಸ್ತರಣೆ ಅವಕಾಶಗಳನ್ನು ಉತ್ತೇಜಿಸುತ್ತದೆ ಮತ್ತು ಪರಂಪರೆ, ಸಂಸ್ಕೃತಿ, ಸಾಹಸ, ಸ್ವಾಸ್ಥ್ಯ ಮತ್ತು ಪ್ರಕೃತಿ ಆಧಾರಿತ ಪ್ರವಾಸೋದ್ಯಮ ಸೇರಿದಂತೆ ಕರ್ನಾಟಕದ ಅನನ್ಯ ಕೊಡುಗೆಗಳನ್ನು ವಿಶ್ವಕ್ಕೆ ಪರಿಚಯಿಸಲಿದೆ.
*ಕೆಐಟಿಇ 2025ರ ಮುಖ್ಯಾಂಶಗಳು:*
B2B ನೆಟ್ವರ್ಕಿಂಗ್ ಅವಕಾಶಗಳು: ಭಾರತ ಮತ್ತು ವಿದೇಶಗಳ 400 ಕ್ಕೂ ಹೆಚ್ಚು ಉದ್ಯಮ ಸಂಸ್ಥೆಗಳು ಮತ್ತು ಕರ್ನಾಟಕದಿಂದ 150 ಕ್ಕೂ ಹೆಚ್ಚು ಪಾಲುದಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಇದು ವ್ಯಾಪಾರ ಮತ್ತು ಉದ್ಯಮ ವೃತ್ತಿಪರರಿಗೆ ಪರಿಣಾಮಕಾರಿ ಸಂವಹನಗಳನ್ನು ಹಾಗು ಅವಕಾಶಗಳನ್ನು ಖಚಿತಪಡಿಸುತ್ತದೆ.
ಕರ್ನಾಟಕದ ವೈಶಿಷ್ಟ್ಯತೆಗಳ ಪ್ರದರ್ಶನ : ಈ ಎಕ್ಸ್ ಪೋ ದಲ್ಲಿ ಕರ್ನಾಟಕದ ಐಕಾನಿಕ್ ತಾಣಗಳು, ಹೊಸದಾಗಿ ಸೇರ್ಪಡೆಗೊಂಡ ಪ್ರವಾಸೋದ್ಯಮ ಸರ್ಕ್ಯೂಟ್ಗಳು ಮತ್ತು ಸುಸ್ಥಿರ ಪ್ರವಾಸೋದ್ಯಮ ಉಪಕ್ರಮಗಳನ್ನು ಇಡೀ ವಿಶ್ವಕ್ಕೆ ಪರಿಚಯಿಸಲಾಗುವುದು.
ಸಾಂಸ್ಕೃತಿಕ ಸಂಭ್ರಮ: ಕರ್ನಾಟಕದ ಕಲೆ, ಸಂಗೀತ ಮತ್ತು ಪಾಕಪದ್ಧತಿಯನ್ನು ಪರಿಚಯಿಸುವ `ಸಂಜೆ ಕಾರ್ಯಕ್ರಮಗಳು.
ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ, ಅಸೋಸಿಯೇಷನ್ ಆಫ್ ಡೊಮೆಸ್ಟಿಕ್ ಟೂರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ADTOI), ಅನ್ವೆಂಚರ್ ಟೂರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ATOAI), ಇಂಡಿಯಾ ಅಸೋಸಿಯೇಷನ್ ಆಫ್ ಟೂರ್ ಆಪರೇಟರ್ಸ್ (IATO), ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (TAAI), ಬಿಸಿಐಸಿ (BCIC), ಎಫ್ ಕೆ ಸಿ ಸಿಸಿ ಐ ( FKCCI), ಎಫ್ ಎಚ್ ಆರ್ ಎ ಐ ( FHRAI), ಕರ್ನಾಟಕ ಟೂರಿಸಂ ಫೋರಮ್, ಎಂಟರ್ಪ್ರೈಸಿಂಗ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಇಟಿಎಎ), ಎಸ್ಕೆಎಎಲ್, ಸೌತ್ ಇಂಡಿಯಾ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ (ಸಿಹ್ರಾ), ಟ್ರಾವೆಲ್ ಏಜೆಂಟ್ ಫೆಡರೇಶನ್ ಆಫ್ ಇಂಡಿಯಾ (ಟಿಎಎಫ್ಐ) ಇತ್ಯಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ.
ಕರ್ನಾಟಕ ಇಂಟರ್ನ್ಯಾಷನಲ್ ಟ್ರಾವೆಲ್ ಎಕ್ಟೋ (KITE) ನಂತಹ B2B ಕಾರ್ಯಕ್ರಮವು ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸುವಲ್ಲಿ ಅನೇಕ ರೀತಿಯಲ್ಲಿ ಪ್ರಯೋಜನಗಳನ್ನು ಹೊಂದಿದೆ.
1.ಜಾಗತಿಕ ಮಟ್ಟದಲ್ಲಿ ಕರ್ನಾಟಕದ ಆರ್ಕಷ್ರಣೆಯನ್ನು ಹೆಚ್ಚಿಸುವುದು:
ವಿಶಿಷ್ಟ ಕೊಡುಗೆಗಳನ್ನು ಪ್ರದರ್ಶಿಸುವುದು: ಕೆ ಐ ಟಿ ಇ 2025ಯು ಕರ್ನಾಟಕದ ಶ್ರೀಮಂತ ಪರಂಪರೆ, ಪರಿಸರ-ಪ್ರವಾಸೋದ್ಯಮ ಹಾಟ್ಸ್ಟಾಟ್ಗಳು, ಸಾಹಸ ತಾಣಗಳು ಮತ್ತು ಕ್ಷೇಮ ಸೇವಾಧಾಮಗಳು ಸೇರಿದಂತೆ ಕರ್ನಾಟಕದ ವೈವಿಧ್ಯಮಯ ಆಕರ್ಷಣೆಗಳನ್ನು ವಿಶ್ವಕ್ಕೆ ಪರಿಚಯಿಸಲು ಒಂದು ಅದ್ಭುತ ವೇದಿಕೆಯನ್ನು ಒದಗಿಸುತ್ತದೆ.
ಜಾಗತಿಕ ಪ್ರವಾಸಿಗರನ್ನು ತಲುಪುವುದು: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೋಸ್ಟ್ ಮಾಡಿದ ಖರೀದಿದಾರರು ಕರ್ನಾಟಕ ಪ್ರವಾಸೋದ್ಯಮದ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಆಯಾ ದೇಶಗಳಲ್ಲಿ ಕರ್ನಾಟಕದ ಪ್ರವಾಸೋದ್ಯಮದ ಬಗ್ಗೆ ಪ್ರಚಾರ ಮಾಡುತ್ತಾರೆ. ಇದರಿಂದಾಗಿ ಜಾಗತಿಕ ಪ್ರವಾಸೋದ್ಯಮ ತಾಣವಾಗಿ ಕರ್ನಾಟಕವನ್ನು ವಿದೇಶಿ ಪ್ರವಾಸಿಗರಿಗೆ ಪರಿಚಯಿಸಲು ಸಾಧ್ಯವಿದೆ.
2 ವ್ಯಾಪಾರ ಅವಕಾಶಗಳನ್ನು ಹೆಚಿಸುವುದು-ಸುಗಮಗೊಳಿಸುವುದು:
ಬಿ2ಬಿ ನೆಟ್ವರ್ಕಿಂಗ್: ಸ್ಥಳೀಯ ಪ್ರವಾಸೋದ್ಯಮ ವ್ಯವಹಾರಗಳನ್ನು, ಉದ್ಯಮಿಗಳನ್ನು ಜಾಗತಿಕ ಖರೀದಿದಾರರು, ಪ್ರವಾಸ ನಿರ್ವಾಹಕರು ಮತ್ತು ಟ್ರಾವೆಲ್ ಏಜೆನ್ಸಿಗಳೊಂದಿಗೆ ಸಂಪರ್ಕಿಸುವ ಮೂಲಕ, ಕೆ ಐ ಟಿ ಇ 2025 ಪಾಲುದಾರಿಕೆಗಳು ಮತ್ತು ಸಹಯೋಗಗಳಳಿಗೆ ಅವಕಾಶ ಸೃಷ್ಟಿಸುತ್ತದೆ. ಇದು ಪ್ರವಾಸೋದ್ಯಮದಲ್ಲಿ ಆದಾಯ ಹೆಚ್ಚಿಸುತ್ತದೆ.
ಸ್ಥಳೀಯ ಉದ್ಯಮಗಳನ್ನು ಉತ್ತೇಜಿಸುವುದು: ಕರ್ನಾಟಕದ ಸಣ್ಣ ಮತ್ತು ಮಧ್ಯಮ ಪ್ರವಾಸೋದ್ಯಮ ಉದ್ಯಮಗಳು ತಮ್ಮ ಗ್ರಾಹಕರ ನೆಲೆಯನ್ನು ವಿಸ್ತರಿಸುವ ಮೂಲಕ ಜಾಗತಿಕ ಮಾರುಕಟ್ಟೆಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ.
3 ಪ್ರವಾಸೋದ್ಯಮ ಆದಾಯ ಮತ್ತು ಉದ್ಯೋಗ ಹೆಚ್ಚಳ:
ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವುದು: ಪ್ರವಾಸೋದ್ಯಮ ಚಟುವಟಿಕೆ ವಿಸ್ತಾರಗೊಂಡಂತೆಲ್ಲ, ವಸತಿ, ಊಟ, ಸಾರಿಗೆ ಮತ್ತು ಸ್ಥಳೀಯ ಆಕರ್ಷಣೆಗಳ ಮೇಲೆ ಪ್ರವಾಸಿಗರ ಅದರ ಹೆಚ್ಚುತ್ತದೆ. ರಾಜ್ಯದಾದ್ಯಂತ ಇದು ಸಮುದಾಯಗಳ ಆರ್ಥಿಕ ಸ್ಥಿತಿಗತಿ ಉತ್ತಮಗೊಳ್ಳುವಿಕೆಗೆ ಕಾರಣವಾಗುತ್ತದೆ.
ಉದ್ಯೋಗ ಸೃಷ್ಟಿ: ಪ್ರವಾಸೋದ್ಯಮದ ಚಟುವಟಿಕೆಗಳಿಗೆ ಬೇಡಿಕೆ ಹೆಚ್ಚಿದಂತೆಲ್ಲ ಆರ್ಥಿಕ ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತದೆ. ವಿಶೇಷವಾಗಿ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ, ಕರ್ನಾಟಕದ ಅನೇಕ ವಿಶಿಷ್ಟ ಆಕರ್ಷಣೆಗಳಿವೆ. ಇಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚುತ್ತವೆ.
4. ಕಡಿಮೆ ತಿಳಿದಿರುವ ಸ್ಥಳಗಳ ಪ್ರಚಾರ:
ವೈವಿಧ್ಯಮಯ ಪ್ರವಾಸೋದ್ಯಮ ಕೊಡುಗೆಗಳು: ಕೆಐಟಿಇ 2025 ಕರ್ನಾಟಕದ ಆಫ್ಬೀಟ್ ತಾಣಗಳು ಮತ್ತು ಹೊಸ ಪ್ರವಾಸೋದ್ಯಮ ಸರ್ಕ್ಯೂಟ್ಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಇದು ಈಗಾಗಲೇ ಪ್ರಸಿದ್ಧಗೊಂಡಿರುವ ಪ್ರವಾಸಿ ತಾಣಗಳ ಮೇಲೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಹೆಚ್ಚು ಪ್ರವಾಸಿಗರನ್ನು ಹೊಸ ಪ್ರವಾಸಿ ತಾಣಗಳಿಗೆ ಆಕರ್ಷಿಸುತ್ತದೆ.
ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ: ಪ್ರವಾಸೋದ್ಯಮ ಚಟುವಟಿಕೆಗಳನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡುವ ಮೂಲಕ, ರಾಜ್ಯವು ಸಮತೋಲಿತ ಆರ್ಥಿಕ ಬೆಳವಣಿಗೆ ಮತ್ತು ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಬಹುದು.
ಟ್ರಾವೆಲ್ ಹಬ್ ಆಗಿ ಕರ್ನಾಟಕದ ಬ್ರಾಂಡ್ ಬಲವರ್ಧನೆ
ಪ್ರವಾಸಿಗರ ಆದ್ಯತೆಯ ತಾಣವಾಗಿ ಕರ್ನಾಟಕ : ಕೆಐಟಿಇ 2025 ನಂತಹ ಕಾರ್ಯಕ್ರಮಗಳು ಕರ್ನಾಟಕವನ್ನು ಪ್ರವಾಸ, ವ್ಯಾಪಾರ ಮತ್ತು ಅತಿಥ್ಯವನ್ನು ಎದುರು ನೋಡುವ ಪ್ರವಾಸಿಗರ ಮೊದಲ ಆದ್ಯತೆಯ ರಾಜ್ಯವಾಗಿ ಆಯ್ಕೆಮಾಡಲು – ಸಹಾಯ ಮಾಡುತ್ತದೆ. ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸುತ್ತದೆ.
ಪ್ರವಾಸೋದ್ಯಮ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು: ಕರ್ನಾಟಕಕ್ಕೆ ಹೆಚ್ಚು ಹೆಚ್ಚು ಪ್ರವಾಸಿಗರು ಆಗಮಿಸಿದಂತೆಲ್ಲ ಅತಿಥ್ಯ, ಸಾರಿಗೆ ಮತ್ತು ಇತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗಳನ್ನು ಆಕರ್ಷಿಸುತ್ತದೆ. ಒಟ್ಟಾರೆ ಪ್ರವಾಸೋದ್ಯಮ ಅನುಭವವನ್ನು ಸುಧಾರಿಸುತ್ತದೆ.
ಇಂತಹ ಉಪಕ್ರಮಗಳ ಮೂಲಕ ಕರ್ನಾಟಕವು ಪ್ರವಾಸೋದ್ಯಮ ಕ್ಷೇತ್ರದಲ್ಲಿನ ತನ್ನೆಲ್ಲಾ ಸಾಮರ್ಥ್ಯ, ಅವಕಾಶಗಳನ್ನು ಒಳಗೊಳ್ಳುವ ಆರ್ಥಿಕ ಬೆಳವಣಿಗೆ, ಸಾಂಸ್ಕೃತಿಕ ವಿನಿಮಯ ಮತ್ತು ಸುಸ್ಥಿರ ಅಭಿವೃದ್ಧಿಗೆ ಬಳಸಿಕೊಳ್ಳಬಹುದು.
ಪ್ರವಾಸೋದ್ಯಮ ಮಂಡಳಿಗಳು, ಟ್ರಾವೆಲ್ ಏಜೆನ್ಸಿಗಳು, ಟೂರ್ ಆಪರೇಟರ್ಗಳು, ಹೋಟೆಲ್ ಸರಪಳಿಗಳು ಮತ್ತು ಇತರ ಪ್ರವಾಸೋದ್ಯಮ-ಸಂಬಂಧಿತ ವ್ಯವಹಾರಗಳಿಗೆ ಕರ್ನಾಟಕದ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರವಾಸೋದ್ಯಮ ವಲಯವನ್ನು ಅನ್ವೇಷಿಸಲು ಮತ್ತು ಹೂಡಿಕೆ ಮಾಡಲು ಭಾಗವಹಿಸಲು ಮುಕ್ತವಾಗಿದೆ.
ಪ್ರಮುಖ ಅಂಶಗಳು
*ಭಾರತದ ಅತಿ ದೊಡ್ಡ ಹೋಸ್ಟ್ ಮಾಡಿದ ಖರೀದಿದಾರರ ಪ್ರವಾಸೋದ್ಯಮ- ಸಾರಿಗೆ- ಅತಿಥಿಯೋದ್ಯಮ ಸಮಾರಂಭಗಳಲ್ಲಿ ಒಂದಾಗಿದೆ.
*ಖರೀದಿದಾರರು ಮತ್ತು ಮಾರಾಟಗಾರರ ನಡುವೆ ಆನ್ಲೈನ್ ಸಂವಾದ ಸಂವಾದಗಳು 10,000 ಕ್ಕೂ ಹೆಚ್ಚು B2B ಸಂವಾದಗಳು
20 ಕ್ಕೂ ಹೆಚ್ಚು ವಿವಿಧ ಪ್ರವಾಸೋದ್ಯಮ ವಿಭಾಗಗಳು: ಸಾಹಸ ಮತ್ತು ವನ್ಯಜೀವಿ, ವ್ಯಾಪಾರ ಪ್ರಯಾಣ ಮತ್ತು ಹೋಟೆಲ್ಗಳು, ತೀರ್ಥಯಾತ್ರೆಗಳು, ಕರ್ನಾಟಕದ ಹಬ್ಬಗಳು, ವಿಶ್ವ ಪರಂಪರೆಯ ತಾಣಗಳು, ಸಮ್ಮೇಳನ ಮತ್ತು ಸಭೆಗಳು, ಇತ್ಯಾದಿ.
ಕರ್ನಾಟಕದ ವಿವಿಧ ಸ್ಥಳಗಳು ಮತ್ತು ಹೆಮ್ಮೆಯ ಉತ್ಪನ್ನಗಳನ್ನು ಪ್ರತಿನಿಧಿಸುವ 150 ಪ್ರದರ್ಶಕರು.
ಹಂಪಿ, ಕೊಡಗು ಮತ್ತು ಕಬಿನಿ, ಮೈಸೂರು, ಚಿಕ್ಕಮಗಳೂರು, ಮಂಗಳೂರು, ಬಾದಾಮಿ ಮತ್ತು ಪಟ್ಟದಕಲ್ಲು ಮುಂತಾದ ಕರ್ನಾಟಕದ ಪ್ರಮುಖ ಸ್ಥಳಗಳನ್ನು ಪ್ರದರ್ಶಿಸುವ ಪ್ರವಾಸಗಳು.
ಕರ್ನಾಟಕ ಪ್ರವಾಸೋದ್ಯಮದ ಬಗ್ಗೆ:
ಕರ್ನಾಟಕ ಪ್ರವಾಸೋದ್ಯಮವು ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣಿಕರಿಗೆ ರಾಜ್ಯದ ಅಸಂಖ್ಯಾತ ಆಕರ್ಷಣೆಗಳನ್ನು ಉತ್ತೇಜಿಸಲು ಸಮರ್ಪಿಸಲಾಗಿದೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆ, ವನ್ಯಜೀವಿ ಅಭಯಾರಣ್ಯಗಳು, ಆಕರ್ಷಕ ಕಡಲತೀರಗಳು ಮತ್ತು ವಿಶ್ವ-ಪ್ರಸಿದ್ಧ ವಾಸ್ತುಶಿಲ್ಪದ ಅದ್ಭುತಗಳಿಗೆ ಹೆಸರುವಾಸಿಯಾದ ಕರ್ನಾಟಕವು ಪ್ರವಾಸೋದ್ಯಮಕ್ಕೆ ಆದ್ಯತೆಯ ತಾಣವಾಗಿ ವಿಶ್ವದಲ್ಲೇ ಗುರುತಿಸಲ್ಪಟ್ಟಿದೆ. ಕರ್ನಾಟಕದ ಬಗ್ಗೆ – ರೇಷ್ಮೆ, ಹಾಲು, ಕಾಫಿ, ಜೇನುತುಪ್ಪ ಮತ್ತು ಇನ್ನೂ ಅನೇಕ ಉತ್ಪನ್ನಗಳಿಗೆ ಹೆಸರುವಾಸಿಯಾದ ಒಂದು ರಾಜ್ಯ, ಹಲವು ಪ್ರಪಂಚಗಳು ಎಂದೇ ಕರ್ನಾಟಕ ಪ್ರಸಿದ್ಧ. ಕರ್ನಾಟಕ ಪ್ರವಾಸೋದ್ಯಮ ಸರ್ಕ್ಯೂಟ್ಗಳು, ಕರಕುಶಲ ವಸ್ತುಗಳು, ಪಾಕಪದ್ಧತಿಗಳು, ಕಲೆ, ಕರಕುಶಲ, ಸಂಸ್ಕೃತಿ, ಕೈಮಗ್ಗ ಇತ್ಯಾದಿಗಳನ್ನು ಪ್ರದರ್ಶಿಸುವ 25 ವಿವಿಧ ಬೂಟೀಕ್ಗಳ ಮೂಲಕ ಭವ್ಯವಾದ ರೀತಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ವಿಶ್ವ ಪ್ರಸಿದ್ಧ ಮೈಸೂರು ರೇಷ್ಮೆ, ಧಾರವಾಡ ಕಸುತಿ, ರೋಸ್ ವುಡ್ ಕೆತ್ತನೆ, ಮತ್ತು ಶ್ರೀಗಂಧದ ಉತ್ಪನ್ನಗಳು, ಗಂಜಿಫಾ ಪೇಂಟಿಂಗ್ಗಳು, ಕನ್ನಡಿ ಕಸೂತಿ, ಮಸಾಲೆ ಪದಾರ್ಥಕಗಳು, ಬಿದ್ರಿವೇರ್, ಟೆರಾಕೋಟಾ ವಸ್ತುಗಳು, ಜೇನುತುಪ್ಪ, ವೈನ್ ಇತ್ಯಾದಿಗಳಿಗೆ ಕನ್ನಡ ನಾಡು ಜಗತ್ತಿಯಲ್ಲೇ ಪ್ರಸಿದ್ಧ.
‘ಕರ್ನಾಟಕ ಟೂರಿಸಂ ಸೊಸೈಟಿ:’ ಕುರಿತು:
ದಕ್ಷಿಣ ಭಾರತದ ಅತಿದೊಡ್ಡ ರಾಜ್ಯವಾದ ಕರ್ನಾಟಕವು ಶ್ರೀಮಂತ ಸಾಂಸ್ಕೃತಿಕ ಪರಂಪರೆ, ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವವನ್ನು ಹೊಂದಿದೆ. ‘ಕರ್ನಾಟಕ ಟೂರಿಸಂ ಸೊಸೈಟಿ’ ಈ ಪ್ರದೇಶಗಳನ್ನು ಆಕರ್ಷಕ ಮತ್ತು ಸುಸ್ಥಿರ ಪ್ರವಾಸಿ ತಾಣವಾಗಿ ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಇವುಗಳ ವಿಶಿಷ್ಟ ಕೊಡುಗೆಗಳನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಪ್ರವಾಸೋದ್ಯಮ ಚಟುವಟಿಕೆಗಳ ಮೂಲಕ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಜೊತೆ ಜೊತೆಗೆ ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುತ್ತದೆ. ಪ್ರವಾಸಿಗರಿಗೆ ಕನ್ನಡ ನಾಡಿನ ಹೆಮ್ಮೆಯ ಪರಂಪರೆಯನ್ನು ಪರಿಚಯಿಸುತ್ತದೆ.