ಇತ್ತೀಚಿನ ಸುದ್ದಿ
ಟೈಯರ್ ಸ್ಫೋಟ: ನಿಯಂತ್ರಣ ಕಳೆದುಕೊಂಡು ಪಿಕ್ ಅಪ್ ಪಲ್ಟಿ; ಚಾಲಕನಿಗೆ ತೀವ್ರ ಗಾಯ
26/11/2025, 12:26
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಪಿಕ್ ಅಪ್ ವಾಹನದ ಟೈಯರ್ ಸ್ಫೋಟ ಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡು ರಸ್ತೆ ಮದ್ಯದಲ್ಲೇ ಮಗುಚಿಕೊಂಡು, ಕಾರ್ಮಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಸೋಮವಾರಪೇಟೆ ತಾಲ್ಲೂಕಿನ ನಗರೂರು ಗ್ರಾಮದಲ್ಲಿ ಸಂಭವಿಸಿದೆ. ಅರಕಲಗೂಡು ಶಾಸಕ ಎ. ಮಂಜು ಅವರಿಗೆ ಸೇರಿದ ನಗರೂರು ಎಸ್ಟೇಟ್ ನ ಲೈನ್ ಮನೆಯಿಂದ ಕುಸುಬೂರು ಎಸ್ಟೇಟ್ ಲೈನ್ ಮನೆಗೆ ಕಾರ್ಮಿಕರನ್ನು ಕರೆದೋಯುತ್ತಿದ್ದ ಸಂದರ್ಭ ನಗರೂರು ಬಳಿ ಘಟನೆ ನಡೆದಿದ್ದು, ಹಿಂಭಾಗ ನಿಂತಿದ್ದ ಅಸ್ಸಾಂ ಕಾರ್ಮಿಕ ಬಾಬು ಸೇರಿದಂತೆ ಇತರರು ಕೆಳಗೆ ಬಿದ್ದಿದ್ದಾರೆ, ಘಟನೆಯಿಂದ ಬಾಬುವಿನ ಕಾಲು ಮುರಿತ ಉಂಟಾಗಿದ್ದು, ಚಾಲಕ ರವಿ ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಘಟನೆಯ ದೃಶ್ಯ ಸಮೀಪದ ವೇ ಬ್ರಿಡ್ಜ್ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದ್ದು, ವಾಹನದಲ್ಲಿ ಇದ್ದವರು ಪವಾಡದ ರೀತಿ ಪಾರಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಕಾರ್ಮಿಕರನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.












