ಇತ್ತೀಚಿನ ಸುದ್ದಿ
ನೀವು ಟಿಪ್ಪು ಜಯಂತಿ ಮಾಡಿ, ನಾವು ವರಮಹಾಲಕ್ಷ್ಮಿ ಹಬ್ಬ ಮಾಡ್ತೀವಿ: ಕಾಂಗ್ರೆಸ್ ಗೆ ಕೌಂಟರ್ ಕೊಟ್ಟ ಆರಗ ಜ್ಞಾನೇಂದ್ರ
23/08/2024, 17:53
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ನೀವು ಟಿಪ್ಪು ಜಯಂತಿ ಮಾಡಿ ನಾವು ವರಮಹಾಲಕ್ಷ್ಮಿ ಹಬ್ಬ ಮಾಡ್ತೀವಿ. ನೀವು ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಿ ನೋಡೋಣ, ಅದು ಆಗುವುದಿಲ್ಲ ಯಾಕೆಂದರೆ ನಿಮಗೆ ಚುನಾವಣೆಯ ಓಟ್ ಬಗ್ಗೆ ಭಯ ಇದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಶುಕ್ರವಾರದಂದು ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ನಡೆದ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಮಾತನಾಡಿದ ಅವರು,
ನಮ್ಮ ಈ ಒಂದು ಕಾರ್ಯಕ್ರಮಕ್ಕೆ ಸಾವಿರಾರು ಮಹಿಳೆಯರು ಬರುತ್ತಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಬರುವ ಕಾರಣ ಕೆಲವು ಗೊಂದಲಗಳು ಈ ಹಿಂದೆ ಆಗಿದೆ. ಕಳೆದ ಬಾರಿ ಆಗಿದ್ದ ಗೊಂದಲಗಳಿಂದ ನನಗೆ ಸ್ವಲ್ಪ ಭಯ ಕೂಡ ಇತ್ತು. ಆದರೆ ನಮ್ಮ ತಾಯಿಯಂದಿರು, ಅಕ್ಕ ತಂಗಿಯರು ಅದನ್ನೆಲ್ಲಾ ಕ್ಷಮಿಸಿ ಕಳೆದ ಚುನಾವಣೆಯಲ್ಲಿ ಅಧಿಕ ಮತ ನೀಡಿ ಗೆಲ್ಲಿಸಿದರು ಎಂದರು.
ಕಾಂಗ್ರೆಸ್ ಪಕ್ಷದವರು ಕಳೆದ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಹೇಳಿದ್ದರು. ಆದರೆ ನಮ್ಮ ಜನತೆ ಅವರ ಯೋಗ್ಯತೆ ನೋಡಿ ಯಾರಿಗೆ ಮತ ಹಾಕಬೇಕೆಂದು ಯೋಚಿಸಿ ಮತ ಹಾಕಿದ್ದಾರೆ.
ಭಾರತೀಯ ಪರಂಪರೆ ಶಿಥಿಲ ಆಯಿತೋ ಆಗ ಭಾರತ ಇಬ್ಬಾಗ ಆಯಿತು. ಭಾರತೀಯ ಪರಂಪರೆ ಸಂಸ್ಕೃತಿ ಎಲ್ಲಿ ಚೆನ್ನಾಗಿದೆಯೋ ಅಲ್ಲಿ ಎಲ್ಲವೂ ಚನ್ನಾಗಿದೆ. ಯಾರೋ ಬಂದು ನಮ್ಮ ಭಾರತದ ಮೇಲೆ ದಾಳಿ ಮಾಡಿದರೆ ಏನಾಗುವುದಿಲ್ಲ ಆದರೆ ನಮ್ಮ ಹೆಣ್ಣು ಮಕ್ಕಳು ಯಾವಾಗ ಸಂಸ್ಕೃತಿ, ಪರಂಪರೆ ಮರೆಯುತ್ತಾರೋ ಆಗ ನಮ್ಮ ದೇಶ ಹಾಳಾಗುತ್ತದೆ ಎಂದರು.
*ಮಹಿಳೆಯರಿಗೆ ಬಾಗಿನ ಹಂಚಿಕೆ:*
ಈ ಬಾರಿ ವರಮಹಾಲಕ್ಷ್ಮಿ ಹಬ್ಬದ ಆಚರಣೆಯಲ್ಲಿ ಸರಿ ಸುಮಾರು 2000ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದರು. ಸಂಸದ ಬಿ ವೈ ರಾಘವೇಂದ್ರ ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕಾರಣಾಂತರಗಳಿಂದ ಆಗಮಿಸಲಿಲ್ಲ. ಬಂದಂತಹ ಎಲ್ಲಾ ಮುತ್ತೈದೆಯರಿಗೂ ಬಾಗಿನ ವಿತರಣೆ ಮಾಡಲಾಯಿತು.
ಕಳೆದ ಎರಡು ವರ್ಷಗಳಿಂದ ವರಮಹಾಲಕ್ಷ್ಮಿ ಹಬ್ಬ ಭಾರಿ ವಿಶೇಷವಾಗಿತ್ತು. ವಿಧಾನಸಭಾ ಚುನಾವಣೆಯ ಸಮಯವಾಗಿದ್ದ ಕಾರಣ ಒಂದು ಬಾರಿ ಬೆಳ್ಳಿ ಕಾಯಿನ್, ಸೀರೆ ವಿತರಣೆ ಮಾಡಿದ್ರೆ ಕಳೆದ ಬಾರಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಹ ಸೀರೆ ವಿತರಣೆ ಮಾಡಲಾಗಿತ್ತು.
ಈ ಹಿನ್ನಲೆಯಲ್ಲಿ ಈ ಬಾರಿ ಸೀರೆ ಸಿಗುತ್ತದೆ ಎಂಬ ಕಾರಣದಿಂದ ಅನೇಕ ಮಹಿಳೆಯರು ತಂಡೋಪತಂಡವಾಗಿ ಆಗಮಿಸಿದ್ದರು.