ಇತ್ತೀಚಿನ ಸುದ್ದಿ
ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು
23/01/2026, 18:24
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪೊನ್ನoಪೇಟೆ ತಾಲ್ಲೂಕಿನ ಗೋಣಿಕೊಪ್ಪ- ತಿತಿಮತಿ ರಸ್ತೆಯ ಮತ್ತಿಗೋಡು ಆನೆ ಶಿಬಿರ ಬಳಿಯ ಅರಣ್ಯದಲ್ಲಿ ಕಳೆದ ರಾತ್ರಿ ಮುಖ್ಯ ರಸ್ತೆಯಲ್ಲಿ ಓಡಾಡಿದ ಹುಲಿಯ ದೃಶ್ಯ ಕಂಡು ಬಂದಿದ್ದು ಕೆಲವು ಕಾಲ ಭಯದ ವಾತಾವರಣ ಸೃಷ್ಟಿಸಿತ್ತು.
ಹುಲಿ ಓಡಾಡುತ್ತಿರುವ ಬಗ್ಗೆ ತಕ್ಷಣ ಅಲರ್ಟ್ ಆದ ಅರಣ್ಯ ಇಲಾಖೆ ಸಿಬ್ಬಂದಿಗಳು ವಾಹನಗಳು ತಡೆದು ಸೈರೆನ್ ಹಾಕುವ ಮೂಲಕ ಎಚ್ಚರಿಕೆ ಸಂದೇಶ ನೀಡಿದ್ದು ಹುಲಿ ಸದ್ಯ ನಾಗರಹೊಳೆ ಅರಣ್ಯ ಪ್ರದೇಶದ ಕಡೆ ತೆರಳಿದೆ ಆದರೆ ಈ ಭಾಗದಲ್ಲಿ ಕೆಲವು ಗ್ರಾಮಗಳು ಹಾಗೂ ಕೃಷಿ ತೋಟಗಳು ಇರುವುದರಿಂದ ಸಾರ್ವಜನಿಕರು ಎಚ್ಚರವಹಿಸಬೇಕಾಗಿದೆ.













