ಇತ್ತೀಚಿನ ಸುದ್ದಿ
ತುಂಬೆಯಿಂದ ನೀರು ಸರಬರಾಜು ಮಾಡುವ ಪ್ರಮುಖ ಪೈಪ್ ಲೈನಿನಲ್ಲಿ ತೊಂದರೆ: 4 ದಿನಗಳಿಂದ ಮಂಗಳೂರಿಗೆ ನೀರಿಲ್ಲ!; ಖಾಸಗಿ ಟ್ಯಾಂಕರ್ ಗಳಿಗೆ ಭಾರೀ ಡಿಮಾಂಡ್
09/02/2024, 18:43
ಮಂಗಳೂರು(reporterkarnataka.com): ತುಂಬೆ ಅಣೆಕಟ್ಟಿನಿಂದ ಬೆಂದೂರುವೆಲ್
ಪಂಪ್‌ಹೌಸ್‌ಗೆ ನೀರು ಸರಬರಾಜು ಮಾಡುವ ಪ್ರಮುಖ ಪೈಪ್ ಲೈನ್ ನಲ್ಲಿ ಸಮಸ್ಯೆ ಉಂಟಾಗಿರುವುದರಿಂದ ಕಳೆದ 4 ದಿನಗಳಿಂದ ನಗರಕ್ಕೆ ನೀರು ಸರಬರಾಜು ತೊಂದರೆ ಉಂಟಾಗಿದೆ.
ನಗರಕ್ಕೆ ನೀರು ಸರಬರಾಜು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕಡಲನಗರಿಯಲ್ಲಿ ಸತತ 4 ದಿನಗಳಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ವಿವಿಧೆಡೆ ನಾಗರಿಕರು ನೀರಿಲ್ಲದೆ ತೊಂದರೆಗೀಡಾಗಿದ್ದಾರೆ. ನಗರದ ಕೊಡಿಯಾಲಬೈಲು, ಕದ್ರಿ, ಪಿವಿಎಸ್, ಬಂದರು, ಲೇಡಿಹಿಲ್, ಕೋಡಿಕಲ್, ಮೇರಿಹಿಲ್, ಪಚ್ಚನಾಡಿ, ಅಶೋಕನಗರ, ದೇರೆಬೈಲ್, ನಾಗುರಿ, ಜಲ್ಲಿಗುಡ್ಡೆ, ಕೂಳೂರು, ಪಣಂಬೂರು, ಸುರತ್ಕಲ್, ಕಾಟಿಪಳ್ಳ, ಕಾನ, ಕುಳಾಯಿ, ಮುಕ್ಕ ಸೇರಿದಂತೆ ಹಲವು ಪ್ರದೇಶಗಳ ನಿವಾಸಿಗಳು ನೀರಿಲ್ಲದೆ ತೊಂದರೆಗೀಡಾಗಿದ್ದಾರೆ. ಖಾಸಗಿ ನೀರಿನ ಟ್ಯಾಂಕರ್ ಗಳ ಓಡಾಟ ಜೋರಾಗಿ ನಡೆಯುತ್ತಿದೆ.
ತುಂಬೆಯಲ್ಲಿ ನೇತ್ರಾವತಿ ನದಿಗೆ ಕಟ್ಟಿದ ಅಣೆಕಟ್ಟಿನಿಂದ ಬೆಂದೂರ್‌ವೆಲ್ ಪಂಪ್‌ಹೌಸ್‌ಗೆ ನೀರನ್ನು ಸಾಗಿಸುವ1 ಮೀಟರ್ ವ್ಯಾಸದ ಪೈಪ್‌ಲೈನ್‌ನಲ್ಲಿ ಸಮಸ್ಯೆ ಉಂಟಾಗಿದೆ. ನಗರದ ನಗರೋಡಿ ಬಳಿ ಪೈಪ್‌ಲೈನ್‌ಗೆ ಹಾನಿಗೀಡಾಗಿದೆ.