ಇತ್ತೀಚಿನ ಸುದ್ದಿ
ತುಂಬೆ: ಮಲ ತಂದೆಯಿಂದ ಅಪ್ರಾಪ್ತ ಮಗಳ ಮೇಲೆ ನಿರಂತರ ಅತ್ಯಾಚಾರ: ಬಾಲಕಿ ಗರ್ಭವತಿ: ಆರೋಪಿ ಜೈಲುಪಾಲು
18/11/2022, 15:06

ಬಂಟ್ವಾಳ(reporterkarnataka.com): ಮಲ ತಂದೆಯೇ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿಸಿದ ಭಯಾನಕ ಘಟನೆ ಬಂಟ್ವಾಳ ಸಮೀಪದ ತುಂಬೆ ಬಳಿ ನಡೆದಿದ್ದು, ಆರೋಪಿ ಮಲತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪಾಪಿ ಆರೋಪಿಯನ್ನು ತುಂಬೆ ನಿವಾಸಿಯಾಗಿರುವ ವೆಂಕಟೇಶ ಕಾರಂತ ಎಂದು ಗುರುತಿಸಲಾಗಿದೆ. ಈ ಪಾಪಿ ಮಲ ತಂದೆಯು ಮಗಳ ಮೇಲೆ ಯೇ ಕೆಲವು ತಿಂಗಳಿನಿಂದ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಇದರಿಂದ ಬಾಲಕಿ ಗರ್ಭವತಿಯಾಗಿದ್ದಾಳೆ ಎಂದು ತಿಳಿದು ಬಂದಿದೆ.
ವೆಂಕಟೇಶ ಕಾರಂತ ತುಂಬೆಯಲ್ಲಿ ಪುರೋಹಿತನಾಗಿ ಕೆಲಸ ಮಾಡುತ್ತಿದ್ದು, ನಿತ್ಯ ಪೂಜೆ, ಹೋಮ- ಹವನ ನಡೆಸುವ ಈತ ಮಗಳ ಮೇಲೆಯೇ ಕಳೆದ 4 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಾಲಕಿಯ ತಂದೆ ಅಪಘಾತದಲ್ಲಿ ಮರಣ ಹೊಂದಿದ ನಂತರ ಆಕೆಯ ತಾಯಿ ಎರಡನೇ ಮದುವೆಯಾಗಿದ್ದು, ಬಾಲಕಿಯೂ ಕೂಡ ಇವರ ಜೊತೆಯಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.
ಅಪ್ರಾಪ್ತ ಬಾಲಕಿಯನ್ನು 4 ತಿಂಗಳ ಗರ್ಭವತಿ ಮಾಡಿದ ಆರೋಪದ ಮೇಲೆ ಬಾಲಕಿಯ ಮಲತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.