ಇತ್ತೀಚಿನ ಸುದ್ದಿ
ತುಳುನಾಡಿನ ಭೂತಾರಾಧನೆ ಮೂಢನಂಬಿಕೆ: ಬಿ.ಟಿ. ಲಲಿತಾ ನಾಯಕ್ ವಿರುದ್ಧ ಹಿಂಜಾವೇ ಉಡುಪಿ ಠಾಣೆಗೆ ದೂರು
12/11/2022, 20:59

ಉಡುಪಿ (reporterkarnataka.com) : ಕರಾವಳಿಯ ಭೂತಾರಾಧನೆ ಮೂಢನಂಬಿಕೆ ಎಂದಿರುವ ಸಾಹಿತಿ, ಚಿಂತಕಿ, ಬಿ.ಟಿ. ಲಲಿತಾ ನಾಯಕ್ ಹೇಳಿಕೆ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ನಿಯಮದಡಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಉಮೇಶ್ ಅವರು ಸಾಹಿತಿ, ಚಿಂತಕಿ, ಬಿ.ಟಿ ಲಲಿತಾ ನಾಯಕ್ ಅವರ ಚರ್ಚಾಸ್ಪದ ಹೇಳಿಕೆಗಳು ತುಳುನಾಡಿನ ಕೋಟ್ಯಂತರ ಜನರ ಭಾವನೆಗೆ ಧಕ್ಕೆಯಾಗಿದೆ. ದೈವಾರಾಧಕರನ್ನು ಬಿ.ಟಿ ಲಲಿತಾ ನಾಯಕ್ ಹೀಯಾಳಿಸಿದ್ದಾರೆ. ದೈವರಾದನೆಯ ಬಗ್ಗೆ ಬಹಳ ಕೀಳಾಗಿ ಮಾತನಾಡಿ ಮನಸ್ಸಿಗೆ ಧಕ್ಕೆ ಉಂಟು ಮಾಡಿದ್ದಾರೆ.
ಭಾರತೀಯ ದಂಡಸಂಹಿತೆ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಲಿಖಿತ ದೂರು ದಾಖಲು ಮಾಡಿದ್ದೇವೆ. ಲಲಿತಾ ನಾಯಕ್ ಹೇಳಿಕೆಯಿಂದ ಧಾರ್ಮಿಕ ನಂಬಿಕೆ ಮತ್ತು ಭಾವನೆಗೆ ಘಾಸಿಯಾಗಿದೆ.
ಒಂದು ವರ್ಗ, ಸಮುದಾಯದ ಅವಹೇಳನವಾದಾಗ ಜಾರಿಯಾಗುವ ಸೆಕ್ಷನ್ ಹಾಕುವಂತೆ ಮನವಿ ಮಾಡಿದ್ದು, ಮೂರು ವರ್ಷ ಶಿಕ್ಷೆ, ದಂಡ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.