ಇತ್ತೀಚಿನ ಸುದ್ದಿ
ಮಡಿಕೇರಿಯಿಂದ ಮೂವರು ಯಾತ್ರಿಕರು ಶಬರಿಮಲೆಗೆ ಪಾದಯಾತ್ರೆ: 496 ಕಿಲೋಮೀಟರ್ ಕಾಲ್ನಡಿಗೆ
27/12/2025, 09:16
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿಯಿಂದ ಶಬರಿಮಲೆ ವರೆಗೆ ಮೂವರು ಮಾಲಾಧಾರಿಗಳು ಇರುಮುಡಿ ಕಟ್ಟಿ ಪಾದಯಾತ್ರೆ ಆರಂಭಿಸಿದ್ದಾರೆ. ಮಾಲಾಧಾರಿಗಳಾದ ವೇಣು, ಅಪ್ಪಣ್ಣ ಹಾಗೂ ಸಂತೋಷ್ ಕಠಿಣ ವೃತಧಾರಿಯಾಗಿದ್ದು ಪಾದಯಾತ್ರೆ ಮೂಲಕ 496 ಕಿಲೋಮೀಟರ್ ತೇರಳಲಿದ್ದಾರೆ.
ಸರಿಯಾಗಿ ಮಕರ ಸಂಕ್ರಾಂತಿಯoದು ತಲುಪಲಿರುವ ಈ ಮಲಾಧಾರಿಗಳು ಮಕರವಿಳುಕು ಬಳಿಕ ತವರಿಗೆ ಹಿಂದಿರುಗಲಿದ್ದಾರೆ.












