ಇತ್ತೀಚಿನ ಸುದ್ದಿ
ತೊಕ್ಕೊಟ್ಟು ಸೇತುವೆಯ ತಗಡು ಶೀಟಿಗೆ ಬೈಕ್ ಡಿಕ್ಕಿ: ಸಹ ಸವಾರ ಸ್ಥಳದಲ್ಲೇ ಸಾವು; ಇನ್ನೋರ್ವ ಗಂಭೀರ
01/11/2024, 23:32
ಮಂಗಳೂರು(reporterkarnataka.com): ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆ ಮೇಲೆ ಇಂದು ಸಂಜೆ ನಡೆದ ಬೈಕ್ ಅಪಘಾತದಲ್ಲಿ ಸಹ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಬಿ.ಸಿ.ರೋಡ್ ಸಮೀಪದ ಲೊರೆಟ್ಟೋ ಪದವು ನಿವಾಸಿ ಸಲ್ಮಾನ್ ಫಾರೀಶ್ (19) ಎಂದು ಗುರುತಿಸಲಾಗಿದೆ.
ಸೇತುವೆಗೆ ಅಳವಡಿಸಿದ ಕಬ್ಬಿಣದ ತಗಡು ಶೀಟ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಹ ಸವಾರ ವಿದ್ಯಾರ್ಥಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ..
ಸವಾರ ಮೊಹಮ್ಮದ್ ಶಾಕೀರ್ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಲತಃ ಬಿ.ಸಿ.ರೋಡ್ ನಿವಾಸಿಗಳಾದ ಅವರಿಬ್ಬರು ಕೊಣಾಜೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಅವರು ಇಂದು ಸಂಜೆ ಕೊಣಾಜೆ ಯಿಂದ ಮಂಗಳೂರಿನ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ನೇತ್ರಾವತಿ ಸೇತುವೆ ಬಳಿ ಬೈಕ್ ಕಬ್ಬಿಣದ ತಗಡು ಶೀಟ್ ಗೆ ಢಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.