ಇತ್ತೀಚಿನ ಸುದ್ದಿ
ಪುತ್ತೂರಿನಲ್ಲಿ ಈ ಬಾರಿ ಓಣಂ ಔತಣ: ಸೆಪ್ಟೆಂಬರ್ 5ರಂದು ಜೈನ ಭವನದಲ್ಲಿ ಓಣಂ ಸದ್ಯ!
30/08/2025, 18:40

ಪುತ್ತೂರು(reporterkarnataka.com):ಕಳೆದೆರಡು ವರ್ಷದಿಂದ ಶುದ್ಧ ಹಾಗೂ ಸಾಂಪ್ರದಾಯಿಕ ಶೈಲಿಯ ತಿಂಡಿ ತಿನಿಸುಗಳನ್ನು ನೀಡುತ್ತಿದ್ದು ಜನ ಮನ್ನಣೆ ಗಳಿಸಿದ ಹೋಮ್‌ಲಿ ಬೈಟ್ಸ್ ಇದೀಗ.ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಓಣಂ ಹಬ್ಬದ ಪ್ರಯುಕ್ತ ಓಣಂ ಸದ್ಯ ಆಯೋಜಿಸಿದೆ.
ತಿರುವೊಣಂ ದಿನವಾದ ಸೆಪ್ಟೆಂಬರ್ 5ರಂದು ಶುಕ್ರವಾರದಂದು ಪುತ್ತೂರಿನ ಜೈನ ಭವನದಲ್ಲಿ ಓಣಂ ಸದ್ಯ ನಡೆಯಲಿದೆ.
ಮಧ್ಯಾಹ್ನ 12 ರಿಂದ 2:30ರ ವರೆಗೆ ಔತಣಕೂಟ ಜರುಗಲಿದೆ. ನೆರೆ ರಾಜ್ಯ ಕೇರಳದಲ್ಲಿ ಜಾತಿ ,ಮತ, ರಾಜಕೀಯ ಬೇಧ ಇಲ್ಲದೆ ಬಹಳ ಮುಖ್ಯವಾಗಿ ಆಚರಿಸುವ ಓಣಂ ಹಬ್ಬ ಪುತ್ತೂರಿನಲ್ಲೂ ಹೊಸ ಮೆರುಗು ನೀಡಲಿದೆ. ಪುತ್ತೂರಲ್ಲಿ ಎಲ್ಲರಿಗೂ ಮುಕ್ತವಾಗಿ ಬಾಳೆ ಎಲೆಯಲ್ಲಿ ಕಾಳನ್, ಓಲನ್ , ಅಡ ಪ್ರಥಮನ್ ಇತ್ಯಾದಿ 25 ಮಿಕ್ಕಿ ಸಾಂಪ್ರದಾಯಿಕ ಪದಾರ್ಥಗಳೊಂದಿಗೆ ಓಣಂ ಸದ್ಯ! ಪ್ರಸ್ತುತ ಪಡಿಸುತ್ತಿದೆ.ಮುಂಗಡ ಬುಕ್ಕಿಂಗ್ ಮೂಲಕ ಊಟದ ವ್ಯವಸ್ಥೆ ಆಯೋಜಿಸಲಾಗಿದ್ದು, homelybites.co.in ಎಂಬ ವೆಬ್ಸೈಟ್ ಅಥವಾ ಫೇಸ್ಬುಕ್ ಪೇಜ್ ಲೀ ಕಾದಿರಿಸಿದೆ.
ಬನ್ನಿ ಓಣಂ ಹಬ್ಬವನ್ನು ರುಚಿಯನ್ನು ಸವಿಯುತ್ತಾ ಆಚರಿಸೋಣ. ಊಟದ ನಂತರ ಮನೆಗೆ ಕೊಂಡೊಯ್ಯಲು ಪಾಯಸ, ವಿವಿಧ ತರಹದ ತಿಂಡಿ ತಿನಿಸುಗಳ ಪ್ರತ್ಯೇಕವಾಗಿ ಕೌಂಟರ್ ಕೂಡ ಇರುತ್ತದೆ.