ಇತ್ತೀಚಿನ ಸುದ್ದಿ
ಪುನರ್ವಸು ಮಳೆ ಅಬ್ಬರ: ಕೊಚ್ಚಿ ಹೋಗುವ ಭೀತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ!
08/07/2025, 19:31

ರಶ್ಮೀ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಪುನರ್ವಸು ಮಳೆಯ ಅಬ್ಬರಕ್ಕೆ ಸೇತುವೆಯೊಂದು ಕೊಚ್ಚಿ ಹೋಗುವ ಸ್ಥಿತಿ ನಿರ್ಮಾಣವಾಗಿರುವ ಘಟನೆ ಸಾಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಸಾಲೂರು ಗ್ರಾಮ ಪಂಚಾಯತಿಯ ಕುನ್ನಿಕೇವಿ ಸೇತುವೆಯಲ್ಲಿ ಈಗಾಗಲೇ ಹೊಂಡ ಗುಂಡಿಗಳೆಲ್ಲಾ ಬಿದ್ದು ಕೊಚ್ಚಿ ಹೋಗುವ ಪರಿಸ್ಥಿತಿ ಇದ್ದು ಆ ಭಾಗದ ಜನ ಸಾಮಾನ್ಯರಲ್ಲಿ ಭಯ ಭೀತಿ ಉಂಟಾಗಿದೆ.
ಈ ಬಗ್ಗೆ ಸ್ಥಳೀಯ ಗ್ರಾಮಪಂಚಾಯಿತಿ ಆಡಳಿತ ಆಗಲಿ ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ.