ಇತ್ತೀಚಿನ ಸುದ್ದಿ
ಸೋರುತ್ತಿದೆ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ!: ಅಂಗಡಿ ಮಳಿಗೆಯೊಳಗೂ ನೀರು!
16/07/2025, 16:50

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣ ಮಳೆಗಾಲ ಆಗುತ್ತಿದ್ದಂತೆ ಸೋರುತ್ತಿದ್ದು, ಮಳೆಯ ನೀರು ಸಂಪೂರ್ಣ ನಿಲ್ದಾಣದ ಒಳಗೆ ನಿಲ್ಲುತ್ತಿರುವುದರಿಂದ ಬಸ್ ಗಾಗಿ ಕಾಯುವ ಸಾರ್ವಜನಿಕರಿಗೆ ಬಾರಿ ತೊಂದರೆ ಆಗುತ್ತಿದೆ ಎಂದು ಪ್ರಯಾಣಿಕರಿಂದ ದೂರು ಕೇಳಿ ಬಂದಿದೆ .
ಕಳೆದ ವರ್ಷ ಕೂಡ ನೀರು ಸೋರುತ್ತಿತ್ತು. ಆದರೆ ಈ ಬಾರಿ ನೀರು ನಿಲ್ದಾಣದ ಒಳಗೆ ನಿಲ್ಲುತ್ತಿದ್ದು ಗೋಡೆಗಳು ಸಹ ತಂಡಿ ಆಗಿದೆ. ಬಸ್ ನಿಲ್ದಾಣದ ಒಳಗಿರುವ ಅಂಗಡಿ ಮಳಿಗೆ ಹಾಗೂ ಬಸ್ ಏಜೆಂಟರ ಕೊಠಡಿ ಒಳಗೂ ನೀರು ಸೋರುತ್ತಿದೆ. ಈಗಾಗಲೇ ಬಸ್ ನಿಲ್ದಾಣದಲ್ಲಿ ಹಲವು ಮಂದಿ ಜಾರಿ ಬಿದ್ದಿದ್ದು ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಬೇಕೆಂದು ಸಾರ್ವಜನಿಕರು ತಿಳಿಸಿದ್ದಾರೆ.