ಇತ್ತೀಚಿನ ಸುದ್ದಿ
ಖಾಸಗಿ ಶಾಲಾ ವಾಹನ ಚಾಲಕರ ದರ್ಬಾರ್: ಅತೀ ವೇಗ ಪ್ರಶ್ನಿಸಿದರೆ ಗಲಾಟೆಗೆ ಬರುವ ಚಾಲಕರು!
02/07/2025, 23:17

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಖಾಸಗಿ ಶಾಲಾ ವಾಹನಗಳು ಅತ್ಯಂತ ವೇಗವಾಗಿ ಚಲಾಯಿಸುತ್ತಿದ್ದು ಅದನ್ನು ಪ್ರೆಶ್ನೆ ಮಾಡಿದ ಸಾರ್ವಜನಿಕರ ವಿರುದ್ಧ ಗಲಾಟೆ ಮಾಡಲು ಚಾಲಕರು ಬರುತ್ತಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಅರಣ್ಯ ಇಲಾಖೆ ಸಮೀಪ ಖಾಸಗಿ ಶಾಲೆಯ ವಾಹನ ಚಾಲಕ ರಸ್ತೆಯ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿ ಹಾಗೂ ಮಹಿಳೆಯೊಬ್ಬರಿಗೆ ತಾಗಿಸಿದ್ದಾನೆ. ನೋಡಿಕೊಂಡು ಹೋಗಬೇಕು. ಇದು ಶಾಲೆ ಆಗಿರುವುದರಿಂದ ಮಕ್ಕಳು ಓಡಾಡುತ್ತಿರುತ್ತಾರೆ. ಸ್ವಲ್ಪ ನಿಧಾನವಾಗಿ ಹೋಗಿ ಎಂದು ಹೇಳಿದ್ದಕ್ಕೆ ಅಲ್ಲಿದ್ದ ಜನರ ವಿರುದ್ಧ ಚಾಲಕ ಗಲಾಟೆ ಮಾಡಿದ್ದಾನೆ ಎಂದು ಅಲ್ಲಿದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಖಾಸಗಿ ಶಾಲಾ ವಾಹನಗಳು ಅತ್ಯಂತ ವೇಗವಾಗಿ ಹೋಗುತ್ತವೆ ಎಂಬುದಾಗಿ ವರದಿ ಕೂಡ ಮಾಡಿತ್ತು. ಆದರೆ ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಂತೆ ಕಾಣಿಸುತ್ತಿಲ್ಲ. ಮಳೆಗಾಲದಲ್ಲಿ ಅತ್ಯಂತ ವೇಗವಾಗಿ ಹೋಗುವಾಗ ಗಾಡಿ ಸ್ಕಿಡ್ ಆಗುವ ಸಾಧ್ಯತೆ ಇರುತ್ತದೆ. ವಾಹನದಲ್ಲಿ ಮಕ್ಕಳು ಇರುತ್ತಾರೆ ಎಂಬುದನ್ನು ಚಾಲಕರು ಮರೆತಂತೆ ಕಾಣಿಸುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.