ಇತ್ತೀಚಿನ ಸುದ್ದಿ
ಕಳವು ಪ್ರಕರಣ: ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
17/08/2025, 16:52

ಉಪ್ಪಿನನಂಗಡಿ(reporterkarnataka.com): ಕಳವು) ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ,ವಾರೆಂಟ್ ಜಾರಿಯಾಗಿದ್ದ ಉನ್ಮೇಶ ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.
ಬೆಳ್ಳಾರೆ ಪೊಲೀಸ್ ಠಾಣಾ ಅ.ಕ್ರ. ಸಂಖ್ಯೆ: 56/2020, ಕಲಂ: 457, 380 r/w 34 ಐ.ಪಿ.ಸಿ (ಕಳವು) ಪ್ರಕರಣದಲ್ಲಿ ಆರೋಪಿಯಾದ ಉನ್ಮೇಶ ಎಂಬಾತ ನ್ಯಾಯಾಲಯಕ್ಕೆ ಹಾಜರಾಗದೇ, ವಾರೆಂಟ್ ಜಾರಿಯಾಗಿತ್ರು. ಆರೋಪಿಯನ್ನು
ಬೆಳ್ಳಾರೆ ಠಾಣಾ ಪೊಲೀಸರು ಕೇರಳದಲ್ಲಿ ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.