ಇತ್ತೀಚಿನ ಸುದ್ದಿ
Theatre artist | ಹಿರಿಯ ರಂಗ ಕಲಾವಿದೆ, ಸಂಘಟಕಿ ವಿಮಲಾ ರಂಗಾಚಾರ್ ಇನ್ನಿಲ್ಲ
25/02/2025, 22:07

ಬೆಂಗಳೂರು(reporterkarnataka.com): ಬೆಂಗಳೂರಿನ ಹಿರಿಯ ರಂಗ ಕಲಾವಿದೆ, ಸಂಘಟಕಿ, ಲಲಿತಕಲೆಗಳ ಪೋಷಕರಾಗಿದ್ದ ವಿಮಲಾ ರಂಗಾಚಾರ್ (97) ಇಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಬೆಂಗಳೂರಿನ ಎಂಇಎಸ್ ಸಂಸ್ಥೆಯ ಸ್ಥಾಪಕ ಸದಸ್ಯರಾಗಿ, ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಸೇವಾ ಸದನ ಕಟ್ಟಿ ಬೆಳೆಸಿದ ಅವರು, ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಕಟ್ಟಿದ ಭಾರತೀಯ ನಾಟ್ಯ ಸಂಘದ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದರು. ಬೆಂಗಳೂರಿನ ಎಡಿಎ ರಂಗಮಂದಿರದ ಗೌರವ ಕಾರ್ಯದರ್ಶಿಯಾಗಿಯೂ ದುಡಿದಿದ್ದಾರೆ. ಅವರ ಪುತ್ರಿ ರೇವತಿ ವಿದೇಶದಲ್ಲಿದ್ದು, ಅವರು ಬಂದ ನಂತರ ವಿಮಲಾ ಅವರ ಅಂತ್ಯಕ್ರಿಯೆ ಗುರುವಾರ ಅಂದರೆ ಫೆಬ್ರುವರಿ 27ರಂದು ನಡೆಯಲಿದೆ.