ಇತ್ತೀಚಿನ ಸುದ್ದಿ
ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು
02/10/2025, 11:42

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂ ಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಗಜಪಡೆ ಜಂಬೂಸವಾರಿಗೆ ಸಜ್ಜಾಗುತ್ತಿವೆ.
ಕಲಾವಿದ ನಾಗಲಿಂಗಸ್ವಾಮಿ ಹಾಗೂ ತಂಡ ದಸರಾ ಗಜಪಡೆಯನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಿದ್ದು, 14 ಆನೆಗಳಿಗೆ ಬಣ್ಣ ಚಿತ್ತಾರ ಬಿಡಿಸುತ್ತಿದ್ದಾರೆ. ಗಜಪಡೆ ಬಣ್ಣ ಬಣ್ಣಗಳಿಂದ ಸಿಂಗಾರಗೊಳ್ಳುತ್ತಿದ್ದು, 8 ಮಂದಿ ತಂಡದಿಂದ ಬಣ್ಣ ಹಾಕುವ ಕಾರ್ಯ ಪ್ರಗತಿಯಲ್ಲಿದೆ.
ಗಜಪಡೆಗೆ ನವಿಲು, ಗಂಡಬೇರುಂಡ ಹಾಗೂ ಬಳ್ಳಿಗಳ ಚಿತ್ತಾರಗಳನ್ನ ಬಿಡಿಸುತ್ತಿರುವ ಕಲಾವಿದರ ತಂಡವು, ಸೊಂಡಿಲು,ಕಣ್ಣು,ಕಿವಿ,ಕಾಲು ಗಳ ಮೇಲೆ ಆಕರ್ಷಕ ಚಿತ್ತಾರಗಳನ್ನ ಬಿಡಿಸುತ್ತಿದ್ದಾರೆ.
ಈ ಮೂಲಕ ಜಂಬೂಸವಾರಿ ಮೆರವಣಿಗೆಗೆ ದ್ರಾಕ್ಷಿ ಗಜಪಡೆಗೆ ಸನ್ನದ್ದವಾಗಿದ್ದು, ಜಂಬೂಸವಾರಿ ವೀಕ್ಷಣೆಗೆ ಕೋಟ್ಯಾಂತರ ಜನರು ಕಾತುರದಿಂದ ಕಾಯುತ್ತಿದ್ದಾರೆ.