ಇತ್ತೀಚಿನ ಸುದ್ದಿ
ಆರದಿರಲಿ ಬದುಕು ಆರಾಧನ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ಗೆ ಚೌಟ ರಾಣಿ ಅಬ್ಬಕ್ಕ ಪ್ರೇರಣಾ ಪತ್ರದ ಗೌರವ ಪ್ರದಾನ
19/01/2026, 23:45
ಮೂಡುಬಿದಿರೆ(reporterkarnataka.com): ಭಾರತದ ಇತಿಹಾಸ ಎಂದೂ ಮರೆಯದ ಚೌಟ ರಾಣಿ ಅಬ್ಬಕ್ಕ ಅವರ 500ನೇ ಜನ್ಮ ವರ್ಷಾಚರಣೆ ಪ್ರಯುಕ್ತ ಸಮಾಜ ಸೇವಾ ಕ್ಷೇತ್ರದ ಸಾಧನೆಗಾಗಿ ಜವನೆರ್ ಬೆದ್ರ ಫೌಂಡೇಶನ್ (ರಿ.) ವತಿಯಿಂದ ನೀಡಲಾಗುವ ಚೌಟ ರಾಣಿ ಅಬ್ಬಕ್ಕ ಪ್ರೇರಣಾ ಪತ್ರದ ಗೌರವ ಆರದಿರಲಿ ಬದುಕು ಆರಾಧನ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅವರಿಗೆ ಸಂದಾಯವಾಗಿದೆ.
ಚೌಟರ ಅರಮನೆಯ ಕುಲದೀಪ ಅವರು ಪದ್ಮಶ್ರೀ ಭಟ್ ನಿಡ್ಡೋಡಿ ಅವರಿಗೆ ಪ್ರೇರಣಾ ಪತ್ರವನ್ನು ನೀಡಿ ಗೌರವಿಸಿದರು.
ಅರದಿರಲಿ ಬದುಕು ಆರಾಧನಾ ತಂಡದ ಮೂಲಕ ಪದ್ಮಶ್ರೀ ಅವರು ಕಳೆದ 8 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.












