3:38 PM Sunday30 - November 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ… ಶಾಲೆಯಂಗಳದಲ್ಲಿ ತಾರಾಲಯ: ಗ್ರಾಮೀಣ ಮಕ್ಕಳಲ್ಲಿ ಖಗೋಳ ವಿಜ್ಞಾನ ಕೌತುಕ ಬಿತ್ತುವ ಗುರಿ; ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ತೈಲ ಬೆಲೆಯೇರಿಕೆ: ಕೇಂದ್ರ ಸರಕಾರ ವಿರುದ್ಧ  ಈಚನಾಳ ಗ್ರಾಮ ಪಂಚಾಯತ್ ಮುಂದೆ ಕಾಂಗ್ರೆಸ್ ಪ್ರತಿಭಟನೆ 

14/06/2021, 14:46

ಅಮರೇಶ್  ಲಿಂಗಸುಗೂರು ರಾಯಚೂರು

info.reporterkarnataka@gmail.com

ಕೇಂದ್ರ ಸರಕಾರದ ತೈಲ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ವತಿಯಿಂದ ಈಚನಾಳ ಗ್ರಾಮದ ಗ್ರಾಮ ಪಂಚಾಯತ್ ಮುಂದೆ ‘100 ನಾಟೌಟ್’ ಪ್ರತಿಭಟನೆ ಹಿರಿಯ ಕಾಂಗ್ರೆಸ್ ಮುಖಂಡ ಬಸನಗೌಡ ಮೇಟಿ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಆನಂದ ಕುಂಬಾರ ಮಾತನಾಡಿ,  ಕೊವಿಡ್-19 ಮಹಾಮಾರಿಯ ಹಿಡಿತಕ್ಕೆ ಸಿಕ್ಕಿ ಹೈರಾಣವಾಗಿರುವ ಜನಸಾಮಾನ್ಯರ ದುಸ್ಥಿತಿಯ ನಡುವೆಯೇ ಸಂವೇದನಾರಹಿತ ಕೇಂದ್ರ ಸರಕಾರದ ನೀತಿಗಳಿಂದ ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳು ದಿನೇ ದಿನೇ ಏರುತ್ತಿದೆ. ಬಹಳ ಕಡೆ ಲೀಟರ್ ಒಂದರ ಬೆಲೆ ನೂರರ ಗಡಿ ದಾಟಿದೆ. ಇನ್ನುಳಿದ ಕಡೆ ನೂರರ ಹೊಸ್ತಿಲಲ್ಲಿದೆ. ಈ ಬೆಲೆ ಏರಿಕೆಯಿಂದಾಗಿ ಮನೆಬಳಕೆ ಹಾಗೂ ದೈನಂದಿನ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕಳೆದ 13 ತಿಂಗಳುಗಳಲ್ಲಿ ಪೆಟ್ರೋಕ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ ತಲಾ ರೂಪಾಯಿ 25.72 ಮತ್ತು ರೂಪಾಯಿ 23.93 ರಷ್ಟು ಏರಿಕೆಯಾಗಿವೆ. ಕಳೆದ 5 ತಿಂಗಳುಗಳಲ್ಲಿ 43 ಬಾರಿ ದರಗಳನ್ನು ಏರಿಕೆಯಾಗಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಮುಖಂಡರು ಪಿರಸಾಬ ಪಂಚಮ್, ಆದಪ್ಪ ಮೇಟಿ, ದೊಡ್ಡಪ್ಪ ಚಿಗರಿ, ಯಮನಪ್ಪ ಕಟ್ಟೀಮನಿ,  ಸಣ್ಣಗದ್ದೆಪ್ಪ ಚಿಗರಿ,ಮಲ್ಲರಡ್ಡೆಪ್ಪ ದೊಡ್ಡಮನಿ, ಮರಿಯಪ್ಪ ಕಟ್ಟಿಮನಿ, ಹನುಮಂತ ಕುರಿ, ಉಮೇಶ ಚವ್ಹಾಣ, ಖೇಮಣ್ಣ ರಾಠೋಡ, ಗೋವಿಂದ ಪವಾರ್, ಅಮರೇಶ ಮೇಟಿ, ದೇವರೇಡ್ಡಿ ಮೇಟಿ, ಗದ್ದೆಪ್ಪ ಕಟ್ಟಿಮನಿ, ಗದ್ದೆಪ್ಪ ಗೌಂಡಿ, ಶ್ರವಣಕುಮಾರ ದಾಸರ ಇತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು