ಇತ್ತೀಚಿನ ಸುದ್ದಿ
ತೆಲುಗು ಯುವನಟ ಸುಧೀರ್ ವರ್ಮಾ ಸ್ವಗೃಹದಲ್ಲಿ ಆತ್ಮಹತ್ಯೆ: ಕಾರಣ ನಿಗೂಢ
24/01/2023, 12:30

ಹೈದರಾಬಾದ್ (reporterkarnataka.com): ಶೂಟೌಟ್ ವೆಬ್ ಸಿರೀಸ್ ‘ಸೆಕೆಂಡ್ ಹ್ಯಾಂಡ್’ ಸಿನಿಮಾದ ಮೂಲಕ ಗುರುತಿಸಿಕೊಂಡಿದ್ದ ಸುಧೀರ್ ವರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವೈಯಕ್ತಿಕ ಕಾರಣಗಳಿಂದಾಗಿ ತಮ್ಮ ವೈಜಾಗ್ ನ ಮನೆಯಲ್ಲಿ ನಟ ಮಂಗಳವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾವಿಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಸುಧೀರ್ ನಿಧನದ ಸುದ್ದಿ ಹರಡುತ್ತಿದ್ದಂತೆಯೇ ಅವರ ಮನೆಗೆ ಧಾವಿಸಿರುವ ಅನೇಕ ಕಲಾವಿದರು, ಸುಧೀರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.