ಇತ್ತೀಚಿನ ಸುದ್ದಿ
ತೀರ್ಥಹಳ್ಳಿ ಪೊಲೀಸ್ ಕಾನ್ ಸ್ಟೇಬಲ್ ಹೃದಯಾಘಾತಕ್ಕೆ ಬಲಿ
13/12/2024, 19:34
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿ ಹೈವೇ ಪೆಟ್ರೋಲ್ (112) ವಾಹನದ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ ಸ್ಟೇಬಲ್ ಹೃದಯಘಾತದಿಂದ ನಿಧನರಾಗಿದ್ದಾರೆ.
ಪರಶುರಾಮ್ (43) ವರ್ಷ ಶಿವಮೊಗ್ಗಕ್ಕೆ ಕಾರ್ಯ ನಿಮ್ಮಿತ್ತ ಹೋಗಿದ್ದ ಸಂದರ್ಭದಲ್ಲಿ ಹೃದಯಘಾತ ಸಂಭವಿಸಿ ಮೃತಪಟ್ಟಿದ್ದಾರೆ. 2005 ರ ಬ್ಯಾಚ್ ನಲ್ಲಿ ಪೊಲೀಸ್ ಕೆಲಸಕ್ಕೆ ಸೇರಿದ್ದರು. ತೀರ್ಥಹಳ್ಳಿಯಲ್ಲಿ ಹೈವೇ ಪೆಟ್ರೋಲ್ ವಾಹನದ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಇವರ ನಿಧನಕ್ಕೆ ಡಿವೈಎಸ್’ಪಿ ಗಜಾನನ ವಾಮನ ಸುತಾರ ಸೇರಿ ಪೊಲೀಸ್ ಸಿಬ್ಬಂದಿಗಳು ಸಂತಾಪ ಸೂಚಿಸಿದ್ದಾರೆ.