ಇತ್ತೀಚಿನ ಸುದ್ದಿ
ತೀರ್ಥ ಸಂರಕ್ಷಣೆಗೆ ಕ್ರಮ: ಗುಜ್ಜರಕೆರೆಗೆ ವಿವಿಧ ಜಾತಿಯ ಮೀನು ಬಿಡುಗಡೆ
29/08/2024, 18:49
ಮಂಗಳೂರು(reporterkarnataka.com): ನಗರದ ಮಂಗಳಾದೇವಿ ಸಮೀಪದ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ ರಿ. ಮತ್ತು ಸಹರಾ ವೆಲ್ಫೇರ್ ಟ್ರಸ್ಟ್ ವತಿಯಿಂದ ಗುಜ್ಜರಕೆರೆಗೆ ಮೀನುಗಳನ್ನು ಬಿಡಲಾಯಿತು.
ಕೆರೆಯ ನೀರಿನಲ್ಲಿರುವ ಸೊಳ್ಳೆ, ಕೀಟ ನಿಯಂತ್ರಣಕ್ಕಾಗಿ ಗಪ್ಪಿ ಮೀನು, ನೀರಿನ ಒಳಗಿನ ಹುಲ್ಲುಗಳ ನಿಯಂತ್ರಣಕ್ಕಾಗಿ ಹುಲ್ಲು ಗೆಂಡೆ ಮೀನು, ಕೆಸರಿನ ಶುದ್ಧತೆಗೆ ಗೌರಿ ಮೀನು ಮತ್ತು ನೀರಿನ ಮೇಲ್ಮೈ ಪರಿಸರದ ಸ್ವಚ್ಛತೆಗಾಗಿ ಕಾಟ್ಲ ಮೀನು ಬಿಡಲಾಯಿತು.
ಈ ಸಂದರ್ಭ ವೇದಿಕೆಯ ಪ್ರಧಾನ ಕಾರ್ಯದರ್ಶಿ ಪಿ. ನೇಮು ಕೊಟ್ಟಾರಿ, ಗುಜ್ಜರಕೆರೆ, ಡಾ .ಎಂ.ಎಸ್. ನಜೀರ್ ಅವರು ಕೆರೆ ಪರಿಸರ ಸ್ನೇಹಿ ಮೀನುಗಳನ್ನು ಹಾಕಿದರು.
ಈಗಾಗಲೇ ಕೆರೆಯ ಪರಿಸರದಲ್ಲಿ ಮತ್ತು ಕೆರೆಯ ನೀರಿಗೆ ತ್ಯಾಜ್ಯಗಳನ್ನು ಹಾಕಿ ದುಷ್ಕೃತ್ಯ ಎಸೆಯಲಾಗಿದ್ದು, ಈ ನಿಟ್ಟಿನಲ್ಲಿ ಮತ್ತು ಕೆರೆಯಲ್ಲಿರುವ ಜಲಚರಗಳ ಸಂರಕ್ಷಣೆಯ ನಿಟ್ಟಿನಲ್ಲಿಯೂ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳ ಬೇಕೆಂಬುವುದು ಸ್ಥಳೀಯರ ಆಗ್ರಹವಾಗಿದೆ.