7:44 AM Tuesday7 - January 2025
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ ಎಲ್ಲ ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯ: ಇಂಧನ ಸಚಿವ… ಊಟದಲ್ಲಿ ರಾಜಕೀಯ ಬೆರೆಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮೂಡಿಗೆರೆ: ಹುಲಿ ದಾಳಿಗೆ ಬಾಣಂತಿ ಹಸು ಬಲಿ; ಕರುವಿನ ಆಕ್ರಂಧನ ಬೆಂಗಳೂರು: 22ನೇ ಚಿತ್ರಸಂತೆ ಉದ್ಘಾಟನೆ; ಕಲಾಕೃತಿ ಕೊಂಡು ಕಲಾವಿದರ ಬೆಂಬಲಿಸಲು ಮುಖ್ಯಮಂತ್ರಿ ಕರೆ ವಿರೋಧ ಪಕ್ಷ ಆರೋಪ ಮಾಡಿದರೆ ಸಾಬೀತು ಮಾಡಬೇಕು: ದಾವಣಗೆರೆಯಲ್ಲಿ ಸಿಎಂ ಸಿದ್ದರಾಮಯ್ಯ ಇಡಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ: ಕಠಿಣ… ಬೆಂಗಳೂರು: ಬೀದಿ ಬದಿ ವ್ಯಾಪಾರ ಮಾಡಲು ಅವಕಾಶವಿರುವ ರಸ್ತೆಗಳನ್ನು ಗುರುತಿಸಲು ಸೂಚನೆ ಎನ್. ಆರ್. ಪುರ: ರಾಜ್ಯ ಹೆದ್ದಾರಿಯಲ್ಲಿ ಓಡಾಡಿದ ಕಾಡಾನೆ; ನಾಗರಿಕರಲ್ಲಿ ಹೆಚ್ಚಿದ ಆತಂಕ ದೀರ್ಘಾವಧಿ ಸಾಲ 137.85 ಕೋಟಿಗಳ ಅನುದಾನ ವಿನಿಯೋಗ: ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ…

ಇತ್ತೀಚಿನ ಸುದ್ದಿ

ತೀರ್ಥಹಳ್ಳಿಯಲ್ಲೂ ಶುರುವಾಗಿದೆ ಡಿಜಿಟಲ್ ವಂಚನೆ: ಹಣ ಟ್ರಾನ್ಸ್ಫರ್ ಮಾಡುವುದಾಗಿ ನಂಬಿಸಿ 5 ಸಾವಿರ ಪಂಗನಾಮ!

25/09/2024, 15:49

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಆನ್ಲೈನ್ ನಲ್ಲಿ ಯುಪಿಐ ಸ್ಕ್ಯಾನ್ ಮಾಡಿ ಹಣ ಸಂದಾಯ ಮಾಡಿದ ರೀತಿಯಲ್ಲಿ ನಾಟಕವಾಡಿ 5000 ರೂ. ಹಣವನ್ನು ವಂಚಿಸಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಪಟ್ಟಣದ ಗಾಂಧಿಚೌಕದ ಕರ್ಣಾಟಕ ಬ್ಯಾಂಕ್ ಎಟಿಎಂ ಪಕ್ಕದ ಮೊಬೈಲ್ ಅಂಗಡಿಯಲ್ಲಿ ಅನಾಮಿಕ ವ್ಯಕ್ತಿಯೋರ್ವ ಕ್ಯಾಶ್ ಹಣ ಬೇಕು, ನಿಮಗೆ ಗೂಗಲ್ ಪೆ ಮಾಡುತ್ತೇನೆ ಎಂದು ಹಣವನ್ನ ಪಡೆದು ಮೊಬೈಲ್ ಮೂಲಕ ಅಕೌಂಟ್ ಯುಪಿಐ ಸ್ಕ್ಯಾನ್ ಮಾಡಿದ್ದಾನೆ. ನಂತರ ಹಣ ವರ್ಗಾವಣೆ ಆಗಿರುವ ಬಗ್ಗೆ ಟ್ರಾನ್ಸ್ಫರ್ ಅಂತ ಡಿಸ್ಪ್ಲೇಯಲ್ಲಿ ಬಂದಿದ್ದನ್ನು ತೋರಿಸಿ ಮಾಹಿತಿ ನೀಡಿದ್ದಾನೆ. ಇದೇ ಕಾರಣಕ್ಕೆ ಹಣವನ್ನು ನೀಡಲಾಗಿದೆ. ಆದ್ರೆ ಹಣವನ್ನ ಅಕೌಂಟ್ ಗೆ ಟ್ರಾನ್ಸ್ಫರ್ ಮಾಡದೆ ಡಿಜಿಟಲ್ ಮೋಸವನ್ನು ಮಾಡಿದ್ದಾನೆ.
ತಿಪ್ಪೇಸ್ವಾಮಿ ಎಂಬ ಹೆಸರನ್ನು ಆತ ಹೇಳಿದ್ದಾನೆ. ಆದರೆ ಆತ ಯಾರು? ಎಂಬ ಸ್ಪಷ್ಟತೆ ಇಲ್ಲ. ಈ ಬಗ್ಗೆ ತೀರ್ಥಹಳ್ಳಿ ಪೊಲೀಸರಿಗೆ ಕೂಡ ದೂರನ್ನು ನೀಡುವ ಹಂತದಲ್ಲಿ ಈ ಪ್ರಕರಣ ಹೋಗಿದೆ.
ಈಗಾಗಲೇ ಡಿಜಿಟಲ್ ವ್ಯವಹಾರದ ಬಗ್ಗೆ ತೀವ್ರ ಗಮನವಹಿಸಿ ಎಂದು ಪೊಲೀಸರು ಎಷ್ಟೇ ತಿಳಿಸಿದರು ಸಹ ಜನ ಅದರ ಬಗ್ಗೆ ಎಚ್ಛೆತ್ತಿಲ್ಲ.
ಆದಷ್ಟು ಈ ಬಗ್ಗೆ ಜನರು ಡಿಜಿಟಲ್ ವ್ಯವಹಾರದ ಬಗ್ಗೆ ಗಮನ ಹರಿಸಬೇಕಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು