ಇತ್ತೀಚಿನ ಸುದ್ದಿ
‘ಟೆಡ್ ಎಕ್ಸ್ ಸೈಂಟ್ ಅಲೋಶಿಯಸ್’ ಸಮ್ಮೇಳನ: ಎ.ಜೆ. ವೈದ್ಯಕೀಯ ಕಾಲೇಜಿನ ಡಾ. ದೇವನ್ ಅತಿಥಿ ಉಪನ್ಯಾಸ
04/03/2026, 15:14
ಮಂಗಳೂರು(reporterkarnataka.com): ನಗರದ ಎ.ಜೆ. ವೈದ್ಯಕೀಯ ಕಾಲೇಜಿನ ಇ.ಎನ್.ಟಿ (ENT) ವಿಭಾಗದ ಪ್ರಾಧ್ಯಾಪಕರಾದ ಡಾ. ದೇವನ್ ಅವರು ಇತ್ತೀಚೆಗೆ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಅತ್ಯಂತ ಪ್ರತಿಷ್ಠಿತ ‘ಟೆಡ್ ಎಕ್ಸ್ ಸೇಂಟ್ ಅಲೋಶಿಯಸ್’ (TEDxStAloysius) ಸಮ್ಮೇಳನಕ್ಕೆ ಅತಿಥಿ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಅವರು, ತಾವು ಎದುರಿಸುತ್ತಿದ್ದ ಮಧುಮೇಹ (Diabetes), ರಕ್ತದೊತ್ತಡ (Hypertension) ಮತ್ತು ಬೊಜ್ಜಿನ (Obesity) ಸಮಸ್ಯೆಯನ್ನು ಸ್ವತಃ ಹೇಗೆ ಗುಣಪಡಿಸಿಕೊಂಡರು ಎಂಬ ತಮ್ಮ ಮಹತ್ವದ ಸಂಶೋಧನಾತ್ಮಕ ವಿಚಾರಗಳ ಬಗ್ಗೆ ಮಾತನಾಡಿದರು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.












