12:32 PM Tuesday18 - November 2025
ಬ್ರೇಕಿಂಗ್ ನ್ಯೂಸ್
Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಟರ್ಪಾಲಿನೊಳಗಡೆ ಬ್ರಹ್ಮರಕೂಟ್ಲು ಟೋಲ್‌ಬೂತ್!!: ಸುಂಕ ವಸೂಲಿ ಸಿಬ್ಬಂದಿಗಳಿಗೆ ಸೌಕರ್ಯಗಳೇ ಇಲ್ಲ!

02/06/2024, 20:02

ಯಾದವ ಕುಲಾಲ್ ಅಗ್ರಬೈಲು ಬಂಟ್ವಾಳ

info.reporterkarnataka@gmail.com

ಟರ್ಪಾಲಿನಲ್ಲಿ ಮುಚ್ಚಿಕೊಂಡ ನಾಲ್ಕು ಬೂತ್‌ಗಳು,ಟರ್ಪಾಲಿನೊಳಗಡೆ ಕಬ್ಬಿಣದ ತುಕ್ಕು ಹಿಡಿದ ಮೆಶ್‌ನಿಂದ ನಿರ್ಮಾಣ ಮಾಡಿದ ಸುಂಕ ವಸೂಲಿಯ ಪುಟ್ಟ ಕೊಠಡಿ, ಅದರ ಸುತ್ತಲೂ ಕಬ್ಬಿಣದ ಶೀಟುಗಳ ರಾಶಿ, ಮತ್ತೊಂದು ಕಡೆ ತುಕ್ಕು ಹಿಡಿದಿರುವ ಕಬ್ಬಿಣದ ಪೈಪುಗಳ ರಾಶಿ ಹೀಗೆ ಕಬ್ಬಿಣದ ಪಂಜರದೊಳಗಿಂದ ದಿನದಲ್ಲಿ ಲಕ್ಷಾಂತರ ಸುಂಕ ವಸೂಲಿ ಮಾಡುತ್ತಿದ್ದರೂ ಕಾರ್ಮಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ.


ಇದು ಮಂಗಳೂರು-ಬೆಂಗಳೂರು ಮಧ್ಯ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲುವಿನಲ್ಲಿ ಹಲವಾರು ವರ್ಷಗಳಿಂದ ಸುಂಕ ವಸೂಲಿ ಮಾಢುತ್ತಿರುವ ಟೋಲ್ ಕೇಂದ್ರದ ದುಸ್ಥಿತಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದಿನಕ್ಕೆ ಲಕ್ಷಾಂತರ ಹಣವನ್ನು ರಾತ್ರಿ ಹಗಲೆನ್ನದೇ, ಮಳೆ ಬಿಸಿಲೆನ್ನದೇ ರಸ್ತೆಯಲ್ಲೇ ನಿಂತು ದಿನನಿತ್ಯ ಪ್ರವಾಸಿಗರಿಂದ ಬೈಗಳನ್ನೂ ತಿಂದರೂ ಸುಂಕ ವಸೂಲಿ ಮಾಡಿ ನೀಡುವ ಬೂತ್ ಮಾತ್ರ ಗ್ರಾಮೀಣ ಭಾಗದಲ್ಲಿರುವ ಗೂಡಂಗಡಿಗೆ ತರ್ಪಾಲ್ ಮುಚ್ಚಿದ ಸ್ಥಿತಿಯಲ್ಲಿದೆ.
*ಮೇಲ್ಚಾವಣಿ ರಿಪೇರಿ:*
ಕಳೆದ ಕೆಲವು ದಿನಗಳಿಂದ ಟೋಲ್ ಪ್ಲಾಜಾದ ಮೇಲ್ಚಾವಣಿ ಶೀಟು ಇಲ್ಲದಿರುವ ಕಡೆ ಹೊಸ ಶೀಟುಗಳನ್ನು ಹಾಕಿದ್ದು, ಅದರಲ್ಲಿ ಉಳಿದ ಹಳೆಯ ತುಕ್ಕು ಹಿಡಿದಿರುವ ಕಬ್ಬಿಣದ ಕಂಬಗಳು, ಕಬ್ಬಿಣದ ಶೀಟುಗಳು ಸುಂಕ ವಸೂಲಿ ಕೇಂದ್ರದ ಹತ್ತಿರವೇ ರಾಶಿಯಾಗಿ ಬಿದ್ದಿದೆ. ಇದರಿಂದ ಇಲ್ಲಿರುವ ಕಾರ್ಮಿಕರಿಗೆ ಬರುವ ವಾಹನಗಳ ಸುಂಕ ವಸೂಲಿ ಮಾಡಲು ತೊಂದರೆಯಾಗುತ್ತಿದೆ.
*ರಾತ್ರಿ ಮರಳು ಲಾರಿ ವಿರುದ್ಧ ದಿಕ್ಕಿನಲ್ಲಿ ಸಂಚಾರ:* ಸರ್ವೀಸ್ ರಸ್ತೆಯಲ್ಲಿ ಘನವಾಹನಗಳಿಗೆ ತಡೆಬೇಲಿ ನಿರ್ಮಿಸಿರುವುದರಿಂದ ಬಿ.ಸಿ.ರೋಡಿನಿಂದ ಮರಳು ಕೊಂಡೊಯ್ಯಲು ಬರುತ್ತಿರುವ ಹೆಚ್ಚಿನ ವಾಹನಗಳು ರಾತ್ರಿ ಹೊತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ವಿರುದ್ಧ ದಿಕ್ಕಿನಲ್ಲೇ ನಿರಂತರ ಸಂಚಾರ ಮಾಡುತ್ತಿವೆ. ಈ ಸಮಯದಲ್ಲಿ ಸುಂಕ ವಸೂಲಿ ಮಾಡುವ ಕಾರ್ಮಿಕರು ಮಾತ್ರ ಇದ್ದು, ಪೊಲೀಸ್ ಇಲಾಖೆ ಯಾವುದೇ ಸಿಬ್ಬಂದಿಯನ್ನು ನೇಮಿಸದೇ ಇರುವುದರಿಂದ ವಸೂಲಿ ಮಾಡುವ ಸಂದರ್ಭದಲ್ಲಿ ಪ್ರಾಣ ಭಯವೂ ಕಾಡುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ವ್ಯವಸ್ಥಿತ ರೀತಿಯಲ್ಲಿ ಈ ಟೋಲ್ ಬೂತ್‌ನ್ನು ನಿರ್ಮಾಣ ಮಾಡಬೇಕಾಗಿದೆ. ಇದರಿಂದ ಟೋಲ್ ವಸೂಲಿ ಕಾರ್ಮಿಕಗರಿಗೂ ಅನುಕೂಲವಾಗಲಿದೆ ಜೊತೆಗೆ ವಾಹನ ಸವಾರರಿಗೂ ಕೂಡ.
ಎಲ್ಲ ಕಡೆ ಟೋಲ್‌ಗೇಟ್ ವ್ಯವಸ್ಥೆ ಇರುವಂತೆ ಬ್ರಹ್ಮರಕೂಟ್ಲುವಿನಲ್ಲಿ ಇಲ್ಲ. ಸುಂಕ ನೀಡುವವರಿಗೇ ಯಾವುದೇ ವ್ಯವಸ್ಥೆ ಇಲ್ಲ. ಟೋಲ್ ಬೂತ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೂ ಸರಿಯಾದ ಭದ್ರತೆ ಇಲ್ಲ. ಅಷ್ಟೇ ಅಲ್ಲದೇ ಟೋಲ್‌ಗೇಟ್ ಬಳಿ ಬರುವಾಗ ತುಕ್ಕು ಹಿಡಿದಿರುವ ಕಬ್ಬಿಣದ ಕೋಟೆಯೊಳಗೆ ಹೊಕ್ಕಿದಂತಾಗುತ್ತದೆ. ಪೈಂಟ್ ಬಳಿಯದೆ ಎಷ್ಟು ವರ್ಷಗಳಾಗಿರಬಹುದು ಎಂದು ಮಾಧವ ಬಿ.ಸಿ.ರೋಡು ಹೇಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು