ಇತ್ತೀಚಿನ ಸುದ್ದಿ
ತರೀಕೆರೆ: ತೆಂಗಿನಕಾಯಿ ಗೋದಾಮಿಗೆ ಬೆಂಕಿ; ಲಕ್ಷಾಂತರ ಮೌಲ್ಯದ ಕೊಬ್ಬರಿ ಭಸ್ಮ
11/04/2022, 21:05
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ತರೀಕೆರೆ ತಾಲೂಕಿನ ಗುಳ್ಳದಮನೆ ಗ್ರಾಮದಲ್ಲಿ ಮಧ್ಯರಾತ್ರಿ ತೆಂಗಿನಕಾಯಿ ಗೋದಾಮಿಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ತೆಂಗಿನಕಾಯಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ನರಸಿಂಹಪ್ಪ ಎಂಬುವವರಿಗೆ ಸೇರಿದ ತೆಂಗಿನಕಾಯಿ ಶೆಡ್ ಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರಬೇಕೆಂದು ಶಂಕಿಸಲಾಗಿದೆ. ಕೊಬ್ಬರಿಗೆ ಹಾಕಿದ್ದ ಲಕ್ಷಾಂತರ ಮೌಲ್ಯದ ಒಣಗಿದ ಕಾಯಿ ಸುಟ್ಟು ಬೂದಿಯಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಬೆಂಕಿ ಬಂಧಿಸಲಾಯಿತು.ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.