ಇತ್ತೀಚಿನ ಸುದ್ದಿ
ತರೀಕೆರೆ: ಭಾರೀ ಗಾಳಿಗೆ ಮುರಿದು ಬಿದ್ದ 100 ವರ್ಷ ಹಳೆಯ ಬೃಹತ್ ಮರ; ಆಟೋ, ಕಾರು ಪವಾಡಸದೃಶ್ಯ ಪಾರು
06/05/2025, 13:26

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಕಲ್ಲತ್ತಿಗರಿ ದೇವಸ್ಥಾನದ ಬಳಿ ಭಾರೀ ಗಾಳಿಗೆ 100 ವರ್ಷ ಹಳೆಯದಾದ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಆಟೋ ಹಾಗೂ ಕಾರಿನಲ್ಲಿದ್ದವರು ಅದೃಷ್ಟವಶಾತ್ ಜಸ್ಟ್ ಮಿಸ್ ಆಗಿದ್ದಾರೆ.
ಕಲ್ಲತ್ತಿಗರಿ ಇತಿಹಾಸ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಕ್ಷೇತ್ರವಾಗಿದೆ ಕಲ್ಲತ್ತಿಗರಿ ಜಲಪಾತ ಅಂದ್ರೆ ರಾಜ್ಯ-ಅಂತರಾಜ್ಯಕ್ಕೂ ಪ್ರಸಿದ್ದಿ ಪಡೆದಿದೆ. ಮರ ಬಿದ್ದ ಪರಿಣಾಮ ತರೀಕೆರೆ ತಾಲೂಕಿನ ಗೇರಮರಡಿ ಆಟೋ ಚಾಲಕ ಕೈ ಮುರಿತಕ್ಕೊಳಗಾಗಿದ್ದಾರೆ.
ದಾವಣಗೆರೆ ಮೂಲದ ಕಾರಿನಲ್ಲಿದ್ದವರು ಪವಾಡಸದೃಶ್ಯ ಪಾರಾಗಿದ್ದಾರೆ.
ಬೃಹತ್ ಮರ ಬಿದ್ದ ಪರಿಣಾಮ ಕಾರು-ಆಟೋ ಬಹುತೇಕ ಜಖಂಗೊಂಡಿದೆ. ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುವ ಧಾರ್ಮಿಕ-ಪ್ರವಾಸಿ ತಾಣ ಇದಾಗಿದೆ.