5:57 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ತಂದೆಯನ್ನೇ ಕೊಲೆ ಮಾಡಿದ ಪಾಪಿ ಮಗ: ಕಳ್ಳತನ ಮಾಡಬೇಡ ಎಂದು ಬುದ್ದಿಮಾತು ಹೇಳಿದಕ್ಕೆ ಹೇಯ ಕೃತ್ಯ

25/01/2022, 18:21

ಶಿವಣ್ಣ ಗೋಪಾನಹಳ್ಳಿ ಚಳ್ಳಕೆರೆ ಚಿತ್ರದುರ್ಗ

info.reporterkarnataka@gmail.com

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ನಾಯಕನಹಟ್ಟಿ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಬುದ್ದಿ ಹೇಳಿದ ತಂದೆಯನ್ನೇ ಮಗ ಕೊಲೆ ಮಾಡಿದ ಘಟನೆ ನಡೆದಿದೆ.

ಮಲ್ಲೂರಹಳ್ಳಿ ಗ್ರಾಮದ ಬರಮಸಾಗರ ಕೊಪ್ಲೆಯ ಗುಡ್ಲು ಮಲ್ಲಯ್ಯ(65) ಎಂಬವರು ತನ್ನ ಪುತ್ರ ಲೋಕೇಶ್(35) ಎಂಬಾತನಿಗೆ ಕಳ್ಳತನ, ಜಗಳ ಮಾಡಬೇಡ. ಬರೀ ನಿನ್ನ ಮೇಲೆ ಆರೋಪಗಳು ಬರುತ್ತಿವೆ ಎಂದು ಬುದ್ದಿ ಮಾತು ಹೇಳಿದ್ದರು. ಇದರಿಂದ ಕೋಪಗೊಂಡ ಮಗ ಸೋಮವಾರ ರಾತ್ರಿ 12 ಗಂಟೆ ವೇಳೆಗೆ ಹೊಡೆದು ತಂದೆಯನ್ನು ಕೊಲೆ ಮಾಡಿದ್ದಾನೆ.

ಲೋಕೇಶ್ ಮೇಲೆ ರೈತರ ಎತ್ತುಗಳ ಕಳವು ಪ್ರಕರಣ ಸೇರಿದಂತೆ ಹಲವು ಕಳ್ಳತನ ಪ್ರಕರಣಗಳಿದ್ದು ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ರೈತರ ಎತ್ತುಗಳ ಕಳವು ಪ್ರಕರಣದಲ್ಲಿ ಆರೋಪಿ ಲೋಕೇಶ್ ತಪ್ಪಿಸಿಕೊಂಡು ಜಾಮೀನು ಪಡೆದು ಹೊರ ಬಂದಿದ್ದ ಎನ್ನಲಾಗಿದೆ. ಕಳ್ಳತನ ಮಾಡಬೇಡ ಎಂದು ತಂದೆ ಬುದ್ದಿ ಹೇಳಿದ್ದಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ಕೆ.ವಿ.ಶ್ರೀಧರ್ , ವೃತ್ತ ನಿರೀಕ್ಷಕ ರಮಕಾಂತ ಪಿ.ಎಸ್.ಐ ಮಹೇಶ ಲಕ್ಷ್ಮಣ ಹೊಸಪೇಟೆ ಭೇಟಿ  ನೀಡಿ ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಲೋಕೇಶ್ ನನ್ನು ಫೋಲಿಸರು  ವಶಕ್ಕೆ ಪಡೆದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು