ಇತ್ತೀಚಿನ ಸುದ್ದಿ
ಹೆಣ್ಣು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಯಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದು: ಪಿಎಸ್ ಐ ಅಯ್ಯಪ್ಪ
21/01/2025, 09:44
ಶಿವು ರಾಠೋಡ್ ಹುಣಸಗಿ ಯಾದಗಿರಿ
info.reporterkarnataka@gmail.com
ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ವೃದ್ಧಿಯಾಗುವುದು ಎಂದು ಕೊಡೇಕಲ್ ಪಿಎಸ್ ಐ ಅಯ್ಯಪ್ಪ ಹೇಳಿದರು.
ಅವರು ಜಿಲ್ಲಾ ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ತಾಲೂಕ್ ಪಂಚಾಯತ್ ಹುಣಸಗಿ ಮತ್ತು ಗ್ರಾಮ ಪಂಚಾಯತ್ ರಾಜನಕೋಳೂರು ಸಹಯೋಗದೊಂದಿಗೆ ರಾಜನಕೋಳೂರ ಗ್ರಾಮದಲ್ಲಿ KHPT ಸ್ಫೂರ್ತಿ ಯೋಜನೆ ಕಡೆಯಿಂದ ತಾಲೂಕು ಮಟ್ಟದ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಮಹಿಳೆಯರಲ್ಲಿ ಎಲ್ಲಾ ಮುಂದೆ ಬರುತ್ತಲ್ಲಿದ್ದು ಅವರಿಗೆ ಸರಿಯಾದ ರೀತಿಯ ಮಾರ್ಗದರ್ಶನದೊಂದಿಗೆ ಪ್ರೋತ್ಸಾಹ ದೊರೆತಲ್ಲಿ ಅವರು ಎಲ್ಲಾ ರಂಗಗಳಲ್ಲಿ ಮುಂದೆ ಬಂದು ಅವರು ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎನ್ನುವದನ್ನು ಸಾಬೀತು ಪಡಿಸುತ್ತಾರೆ ಎಂದು ತಿಳಿಸಿದರು.
ಜಿಲ್ಲಾ KHPT ಸಂಯೋಜಕ ಚಿಂತನ್ ಡಿ ಸೋಜ, DPC ಯಾದಗಿರಿ ಅವರು ಪ್ರಸ್ತಾವಿಕವಾಗಿ ಮಾತನಾಡುತ್ತ ಸ್ಪೂರ್ತಿ ಯೋಜನೆ ಹೆಣ್ಣು ಮಕ್ಕಳ ಬದಲಾವಣೆ ಮತ್ತು ಕ್ರೀಡಾ ಮಹತ್ವ ಬಗ್ಗೆ ತಿಳಿಸುತ್ತ ಸ್ಫೂರ್ತಿ ಯೋಜನೆ ಮೂಲಕ ಕಳೆದ ಎರಡು ವರ್ಷದಲ್ಲಿ ಅತಿ ಹಿಂದುಳಿದ ಭಾಗವೆಂದು ಕರೆಯಲ್ಪಡುವ ಈ ಭಾಗದಲ್ಲಿ ಶಿಕ್ಷಣದ ಜೊತೆಗೆ ಹೆಣ್ಣು ಮಕ್ಕಳಲ್ಲಿ ಪೌಷ್ಠಿಕತೆಯ ನಿವಾರಣೆಯಲ್ಲಿ ಆಗಿರುವ ಬದಲಾವಣೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ. ಸಿಮಾ ಕೋರಿ ಕೊಡೇಕಲ್ ಅವರು ಮಾತನಾಡುತ್ತ ಹೆಣ್ಣು ಮಕ್ಕಳಲ್ಲಿ ಉತ್ಸಾಹ ಬರಲು ದೈಹಿಕವಾಗಿ ಸದೃಡರಾಗಲು ಕ್ರೀಡೆಯು ಅತ್ಯಂತ ಮಹತ್ವ ಪಾತ್ರವನ್ನು ವಹಿಸುವುದರ ಜೋತೆಗೆ ಉತ್ತಮ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಲ್ಲಿದೆ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಸದ್ಯಸರಾದ ಎಚ್.ಸಿ. ಪಾಟೀಲ್, ಪ್ರಮುಖರಾದ ಸೋಮನಗೌಡ ಗುಲಬಳ,
ಸಂಗನಗೌಡ ಮಗನೂರ್, ರಾಜನ ಕೋಳೂರ ಗ್ರಾ.ಪಂ ಸದಸ್ಯರಾದ ರಾಮನಗೌಡ ವಾಟರ್ ಅವರುಗಳು ಕಾರ್ಯಕ್ರಮವನ್ನು ದೀಪಾ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಶಿವರಾಜ್ ಬಿರಾದಾರ್ ಮುಖ್ಯ ಗುರುಗಳ ರಾಜನಕೋಳೂರ ಹೆಣ್ಣು ಮಕ್ಕಳ ಸಬಲೀಕರಣದಲ್ಲಿ ಕ್ರೀಡೆಯ ಮಹತ್ವ ಕೂಡ ಪ್ರಮುಖವಾಗಿತ್ತು. ಶಿಕ್ಷಣ ಜೊತೆ ಕ್ರೀಡೆ ಕೂಡ ವಿದ್ಯಾರ್ಥಿಗಳಿಗೆ ತುಂಬಾ ಅವಶ್ಯಕತೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಮಂಟೇ ದೈಹಿಕ ಶಿಕ್ಷಕರ ರಾಜನಕೋಳೂರು, ಚಿಂತನ್ ಡಿ ಸೋಜಾ DPC ಜಿಲ್ಲಾ ಸಂಯೋಜಕರು ಯಾದಗಿರಿ,ಶಿವರಾಜ ನಾಯಕ TC ತಾಲೂಕು ಸಂಯೋಜಕರು ಹುಣಸಗಿ,ಅನುಸೂಯ ಮುಖ್ಯ ಗುರುಗಳು MPS ರಾಜನಕೋಳೂರು, ರಾಜನಕೋಳೂರ ಗ್ರಾಮದ ಯುವಕರು, KHPT ಸಿಬ್ಬಂದಿ ವರ್ಗ ಪ್ರತಿ ಗ್ರಾಮ ಪಂಚಾಯತ್ ಮೂಲಕ ದೈಹಿಕ ಶಿಕ್ಷಕರು, ಹುಣಸಗಿ ತಾಲೂಕು ಎಲ್ಲಾ ಗ್ರಾಮ ಪಂಚಾಯತ್ ಸಂಬಂಧಿಸಿದ ಹದಿಹರಿಯದ ಹೆಣ್ಣು ಮಕ್ಕಳ ಭಾಗವಹಿಸಿದರು.
ಕಾರ್ಯಕ್ರಮವನ್ನು ವಿದ್ಯಾ ರಾಜನಕೋಳೂರ ಸ್ವಾಗತಿಸಿ, ರೇಣುಕಾ ನಿರೂಪಿಸಿ, KHPT ತಾಲೂಕು ಸಂಯೋಜಕರಾದ ಶಿವರಾಜ ನಾಯಕ ವಂದಿಸಿದರು.