10:00 PM Sunday22 - February 2026
ಬ್ರೇಕಿಂಗ್ ನ್ಯೂಸ್
ಇಬ್ಬರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಸಹಿತ 4 ಮಂದಿ ಬಂಧನ: 12… ಯುವ ಕಾಂಗ್ರೆಸ್ಸಿಗರು ಬೇಷರತ್ ಕ್ಷಮೆ ಕೇಳಲಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್… ಸಿದ್ದಾಪುರ: ವಾಹನಗಳ ಮೇಲೆ ಮುಂದುವರೆದ ಕಾಡಾನೆ ದಾಳಿ; ಕೂದಲು ಎಳೆ ಅಂತರದಲ್ಲಿ ಕಾರ್ಮಿಕರು… ಪಿರಿಯಾಪಟ್ಟಣದ ರಾಷ್ಟ್ರೀಯ ಹೆದ್ದಾರಿ 275 ನಲ್ಲಿ ಅರಣ್ಯ ಬೆಂಕಿಗೆ ಅಹುತಿ:ಅಪಾರ ಪ್ರಮಾಣದ ಬಿದಿರು… ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ವಾಹನ ಡಿಕ್ಕಿ: ಕಾಡುಕೋಣ ಕಾಲು ಮುರಿತ ಐರ್ಲೆಂಡ್‌ನಲ್ಲಿ ಕಡಬ ಕುಟ್ರುಪಾಡಿಯ ಯುವಕ ನಿಗೂಢವಾಗಿ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ… Kodagu | ಸಿದ್ದಾಪುರ: ಟ್ರ್ಯಾಕ್ಟರ್ ಮಗುಚಿ ಬಾದಾಮಿಯ ಕಾರ್ಮಿಕ ದುರ್ಮರಣ Kodagu | ಸಿದ್ದಾಪುರ ಬಳಿ ಕಾರು ಮೇಲೆ ಕಾಡಾನೆ ದಾಳಿ: ಜಖಂ ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಬಂಧನ: ಮಂಗಳೂರು ಸಿಸಿಬಿ ಪೊಲೀಸರಿಂದ 26 ಪ್ರಕರಣಗಳ… ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ

ಇತ್ತೀಚಿನ ಸುದ್ದಿ

ಸ್ವಾತಂತ್ರ್ಯ ಅಮೃತ ಮಹೋತ್ಸವ: ‘ಕ್ಲಬ್ ಹೌಸ್’ ಇತಿಹಾಸದಲ್ಲೇ ಮೊದಲ ಬಾರಿಗೆ 75 ಗಂಟೆಗಳ ಮ್ಯಾರಥಾನ್ ಕಾರ್ಯಕ್ರಮ!

11/08/2022, 21:14

ಮಂಗಳೂರು(reporterkarnataka.com): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ‘ಕ್ಲಬ್ ಹೌಸ್’ ಇತಿಹಾಸದಲ್ಲೇ ಮೊದಲ ಬಾರಿಗೆ 75 ಗಂಟೆಗಳ ಮ್ಯಾರಥಾನ್ ಕಾರ್ಯಕ್ರಮ!

ಈ 75 ಗಂಟೆಗಳ ನಿರಂತರ ಕಾರ್ಯಕ್ರಮದಲ್ಲಿ ಪ್ರತಿ ಗಂಟೆಗೊಮ್ಮೆ ಒಬ್ಬ ಮಹನೀಯರಂತೆ ಒಟ್ಟು 75 ಅವಿಖ್ಯಾತ(ಇದುವರೆಗೆ ಹೆಚ್ಚು ಪರಿಚಯಿಸಲ್ಪಡದ) ಸ್ವಾತಂತ್ರ್ಯ ಕಲಿಗಳ ಪರಿಚಯ ಹಾಗೂ ಇನ್ನೂ ಅನೇಕ ಅಚ್ಚರಿಗಳು ನಿಮಗಾಗಿ…

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಉಪನಿಷತ್ತಿನಿಂದ ಹಿಡಿದು ಉಪಗ್ರಹದವರೆಗೆ ಭಾರತದ ಸಾಧನೆಗಳ ಹೆಗ್ಗುರುತುಗಳನ್ನು ಯಥಾಮತಿ,ಯಥಾಸಾಮರ್ಥ್ಯಾ ಸ್ಮರಿಸುವ ಮೂಲಕ ತಾಯಿ ಭಾರತಿಯ ಅಮೃತಪುತ್ರರಾದ ಭಾರತೀಯರಲ್ಲಿ ದೇಶಾಭಿಮಾನದ ಸ್ಫೂರ್ತಿಯ ನಂದಾದೀವಿಗೆಯನ್ನು ಬೆಳಗುವಂತೆ ಮಾಡುವುದೇ ಈ ಕಾರ್ಯಕ್ರಮದ ಪ್ರಮುಖ ಉದ್ದೇಶ.

‘ಭಾರತೀಯ ಕ್ಷಾತ್ರ ಪರಂಪರೆಯ ಮತ್ತು ಸ್ವರಾಜ್ಯ’ ವಿಷಯಗಳೂ ಸೇರಿದಂತೆ ಹಲವು ಸಂವಾದಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಸಪ್ರಶ್ನೆ, ಏಕಪಾತ್ರಾಭಿನಯ, ‘ಈಸೂರು ದಂಗೆ’ ರಂಗನಾಟಕ ವಾಚನ, ‘ಹಲಗಲಿಯ ಬೇಡರು’ ಐತಿಹಾಸಿಕ ನಾಟಕ, ಚರ್ಚೆ, ಉಪನ್ಯಾಸ, ಸೋಬಾನೆ ಪದ, ಭಜನೆ, ದೇಶಭಕ್ತಿ ಗೀತೆಗಳು, ಜಾನಪದ ಗೀತೆಗಳು, ಹಾಸ್ಯ ಗೀತೆಗಳು, ನಾಟಕ, ತಾನಾಜಿ ವಂಶಸ್ಥರಿಂದಲೇ ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆ ಕೇಳುವ ಅವಕಾಶ… ಏನುಂಟು, ಏನಿಲ್ಲ!!

ಇವಿಷ್ಟೇ ಅಲ್ಲದೆ, ಭಾರತೀಯ ಕಾಲಮಾನ ರಾತ್ರಿ 12 ಗಂಟೆಯ ನಂತರ ಅನಿವಾಸಿ ಭಾರತೀಯರು ಪಾಲ್ಗೊಂಡು ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು