9:06 PM Friday16 - January 2026
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.…

ಇತ್ತೀಚಿನ ಸುದ್ದಿ

ಸುಳ್ಯದ ಜನತೆಗೆ ಚಿನ್ನಾಭರಣಗಳ ಆಯ್ಕೆಗೆ ಹೊಸದೊಂದು ಮಳಿಗೆ ‘ಸ್ವರ್ಣಂ ಜುವೆಲ್ಸ್’: ಜು.7ರಂದು ಶುಭಾರಂಭ

03/07/2025, 16:33

ಸುಳ್ಯ(reporterkarnataka.com): ಸುಳ್ಯದ ಜನತೆಗೆ, ಆಭರಣ ಪ್ರಿಯರಿಗೆ ಚಿನ್ನಾಭರಣಗಳ ವೈವಿಧ್ಯಮಯ ಆಯ್ಕೆಗಾಗಿ ಹೊಸದೊಂದು ಮಳಿಗೆ ‘ಸ್ವರ್ಣಂ ಜುವೆಲ್ಸ್‌’ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ.
ಗ್ರಾಹಕರ ಸೇವೆಯಲ್ಲಿ, ಚಿನ್ನೋದ್ಯಮದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರುವವರ ಪಾಲುದಾರಿಕೆಯೊಂದಿಗೆ ಕಾರ್ಯಾರಂಭ ಮಾಡಲಿರುವ ಸ್ವರ್ಣಂ ಜುವೆಲ್ಸ್‌, ಜುಲೈ 7ರಂದು ಸೋಮವಾರ ಸುಳ್ಯದ ಕೆ.ಎಸ್‌.ಆರ್.ಟಿ.ಸಿ ಬಸ್‌ ನಿಲ್ದಾಣದ ಎದುರು ಸುಂತೋಡು ಎಂಪೋರಿಯಂ ನಲ್ಲಿ ಉದ್ಘಾಟನೆಗೊಳ್ಳಲಿದೆ.
ಗ್ರಾಹಕರಿಗೆ ಸಾಕಷ್ಟು ಪಾರ್ಕಿಂಗ್ ಅವಕಾಶವೂ ಲಭ್ಯವಿದೆ. ವಿಶೇಷ ಪಾರ್ಕಿಂಗ್‌ಗಾಗಿ ಕರೆಮಾಡಿ- 7975425067.

ಸುಂದರ ಸುಳ್ಯಕ್ಕೆ ಸ್ವರ್ಣಂ ಸ್ಪರ್ಶ ಎಂಬ ಘೋಷವಾಕ್ಯದೊಂದಿಗೆ ಕಾರ್ಯಾರಂಭ ಮಾಡಲಿರುವ ನೂತನ ಮಳಿಗೆಯಲ್ಲಿ ಪ್ರತೀ ಖರೀದಿಗೆ ಖಚಿತ ಉಡುಗೊರೆಗಳೂ ಲಭ್ಯವಿವೆ.
ಪ್ರವೀಣ್ ಬಿ ಗೌಡ, ಭವಿತ್ ಯು ಹಾಗೂ ಲೋಕೇಶ್ ಎಂ.ಎಸ್‌, ಸಂಜೀವ ಕೆ. ಅವರು ಸ್ವರ್ಣಂ ಜುವೆಲ್ಸ್‌ನ ಆಡಳಿತ ಪಾಲುದಾರರಾಗಿದ್ದಾರೆ.
ದೀಪೋಜ್ವಲನ ಕಾರ್ಯಕ್ರಮದಲ್ಲಿ ಮುಳಿಯ ಗೋಲ್ಡ್ & ಡೈಮಂಡ್ಸ್‌ನ ಮಾಲೀಕರಾದ ಶ್ರೀಮತಿ ಮತ್ತು ಕೇಶವ ಪ್ರಸಾದ್ ಮುಳಿಯ, ಶ್ರೀಮತಿ ಮತ್ತು ಶ್ರೀ ಕೃಷ್ಣನಾರಾಯಣ ಮುಳಿಯ ಹಾಗೂ ಕುಂಭಕೋಡಿ ಶ್ರೀಮತಿ ಶಶಿಕಲಾ ಶುಭಕರ್ ರಾವ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ.ಅಕ್ಷಯ್ ಕೆ.ಸಿ ಅವರು ಡೈಮಂಡ್‌ ಕೌಂಟರ್ ಅನ್ನು ಉದ್ಘಾಟಿಸಲಿದ್ದಾರೆ. ಸುಂತೋಡು ಎಂಪೋರಿಯಂ ಮಾಲಕ ಸೂರಯ್ಯ ಗೌಡ ಅವರು ಚಿನ್ನಾಭರಣ ಕೌಂಟರ್ ಉದ್ಘಾಟಿಸಲಿದ್ದಾರೆ. ಶ್ರೀಮತಿ ಶ್ರಮಿಕಾ ಸುಂತೋಡು ರವರು ಸ್ವರ್ಣಂ ಸ್ಪೆಷಲ್ ಆಭರಣಗಳನ್ನು ಬಿಡುಗಡೆ ಮಾಡಲಿದ್ದಾರೆ.

*ನಾವು ತುರ್ತು ಸಮಯದಲ್ಲಿ ಗ್ರಾಹಕರ ಮನಸಿಗೊಪ್ಪುವ ಚಿನ್ನಾಭರಣಗಳನ್ನು ವಿಶೇಷವಾದ ವಿನ್ಯಾಸಗಳೊಂದಿಗೆ ತಯಾರಿಸಿಕೊಡುತ್ತೇವೆ. ಗ್ರಾಹಕರು ಮಳಿಗೆಗೆ ಭೇಟಿ ನೀಡಿ ನಮ್ಮಲ್ಲಿರುವ ವ್ಯಾಪಕ ಶ್ರೇಣಿಯ ಆಭರಣಗಳ ಸಂಗ್ರಹವನ್ನು ವೀಕ್ಷಿಸಬೇಕಾಗಿ ಕೋರುತ್ತೇವೆ.*

*- ಆಡಳಿತ ಪಾಲುದಾರರು, ಸ್ವರ್ಣಂ ಜ್ಯುವೆಲ್ಸ್, ಸುಳ್ಯ*

ಇತ್ತೀಚಿನ ಸುದ್ದಿ

ಜಾಹೀರಾತು