8:06 PM Friday14 - November 2025
ಬ್ರೇಕಿಂಗ್ ನ್ಯೂಸ್
ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ…

ಇತ್ತೀಚಿನ ಸುದ್ದಿ

ಸ್ವ ಕ್ಷೇತ್ರದ ಕಾರ್ಯಕ್ರಮ: ಶಾಸಕ ಕುಮಠಳ್ಳಿ ಗೈರು; ಮಾಜಿ ಡಿಸಿಎಂ ಸವದಿ ಹಾಜರು

14/11/2022, 21:32

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ಮತಕ್ಷೇತ್ರದಲ್ಲಿ ಏನೇ ಸರ್ಕಾರಿ ಕೆಲಸಗಳು, ಗುದ್ದಲಿ ಪೂಜೆ, ಸಭೆ ನಡೆದಾಗ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಂತೂ ಇದ್ದೇ ಇರತ್ತಾರೆ. ಆದರೆ ಕ್ಷೇತ್ರದ ಪ್ರತಿನಿಧಿಯಾದ ಶಾಸಕ ಮಹೇಶ ಕುಮಠಳ್ಳಿ ಅವರು ಅವರದೇ ಪಕ್ಷದ ಸಚಿವರುಗಳು ಬಂದರೂ ಅಂತರ ಕಾಯ್ದುಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೆಲ ತಿಂಗಳಗಳ ಹಿಂದೆ 9 ಕೆರೆ ತುಂಬುವ ಯೋಜನೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜೆ. ಸಿ. ಮಾಧುಸ್ವಾಮಿ ಹಾಗೂ ಅಥಣಿ ತಾಲೂಕಿನ‌ ಕೊಟ್ಟಲಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿ. ಸಿ. ಪಾಟೀಲ್ ಅವರು ಸುಮಾರು 35 ಕೋಟಿ ರೂ ವೆಚ್ಚದ ಕೊಟ್ಟಲಗಿ – ನಿಪ್ಪಾಣಿ ರಸ್ತೆ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿದರು. ಆಗಲೂ ಕೂಡಾ ಕುಮಠಳ್ಳಿ ಗೈರಾಗಿದ್ದರು. ನಿನ್ನೆ (ರವಿವಾರ) ಅಥಣಿ ಹೊರವಲಯದಲ್ಲಿರುವ ಹಳ್ಯಾಳ ರೈತ ಸಭಾ ಭವನದಲ್ಲಿ ತಳವಾರ ಸಮುದಾಯದಿಂದ ಅಭಿನಂದನೆ ಸಮಾವೇಶಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಗೈರಾಗಿದ್ದಾರೆ.


ಕಳೆದ ಮೂರು ಕಾರ್ಯಕ್ರಮಕ್ಕೆ ಸಚಿವರು ಸ್ವ ಕ್ಷೇತ್ರಕ್ಕೂ ಬಂದರೂ ಶಾಸಕ ಮಹೇಶ ಕುಮಠಳ್ಳಿ ಗೈರಾಗಿದ್ದಾರೆ. ಯಾವುದೇ ಸಚಿವರು ಕ್ಷೇತ್ರಕ್ಕೆ ಬಂದಾಗ ಅವರನ್ನ ಅಹ್ವಾನ ಮಾಡಬೇಕಾದದ್ದು ಆ ಕ್ಷೇತ್ರದ ಶಾಸಕರು. ಆದರೆ, ಪ್ರತಿಸಲ ಸಚಿವರು ಬಂದಾಗ ಆಹ್ವಾನ ಮಾಡೊದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಒಂದೆರಡ ಸಲ ಯಾವುದೇ ಕಾರ್ಯಕ್ರಮಕ್ಕೆ ಹೋದರು ಮೂರನೇ ಸಲಕ್ಕಾದರೂ ಶಾಸಕ ಮಹೇಶ ಕುಮಠಳ್ಳಿ ಸಚಿವರ ಕಾರ್ಯಕ್ರಮಕ್ಕೆ ಭಾಗಿಯಾಗಬೇಕಿತ್ತು ಅಂತ ಅಥಣಿ ಮತಕ್ಷೇತ್ರದ ಜನ ಮಾತನಾಡಿಕೊಳ್ಳುತ್ತುದ್ದಾರೆ‌.

ಇತ್ತೀಚಿನ ಸುದ್ದಿ

ಜಾಹೀರಾತು