4:12 AM Saturday20 - September 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಇತ್ತೀಚಿನ ಸುದ್ದಿ

ಸೂರ್ಯನ ರಹಸ್ಯಗಳ ಅಧ್ಯಯನಕ್ಕೆ ಇಸ್ರೋದಿಂದ ಪ್ರೊಬಾ 3 ನೌಕೆ: ಡಿಸೆಂಬರ್ ನಲ್ಲಿ ಶ್ರೀಹರಿಕೋಟಾದಿಂದ ಉಡಾವಣೆ

06/11/2024, 15:24

ಹೊಸದಿಲ್ಲಿ(reporterkarnataka.com): ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ಸೂರ್ಯನ ರಹಸ್ಯಗಳನ್ನು ಕಂಡು ಹಿಡಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯುರೋಪಿಯನ್ ಒಕ್ಕೂಟದ ಪ್ರೊಬಾ 3 ಸೂರ್ಯ ವೀಕ್ಷಣಾ ಬಾಹ್ಯಾಕಾಶ ನೌಕೆಯನ್ನು ಡಿಸೆಂಬರ್​ನಲ್ಲಿ ಉಡಾವಣೆ ಮಾಡಲಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ
ಡಾ. ಜಿತೇಂದ್ರ ಸಿಂಗ್ ಈ ಮಹತ್ವದ ವಿಷಯವನ್ನು ಪ್ರಕಟಿಸಿದ್ದಾರೆ.
ಸೂರ್ಯನ ರಹಸ್ಯ ಕಂಡು ಹಿಡಿಯಲು ಭಾರತದ ಬಾಹ್ಯಾಕಾಶ ವಿಜ್ಞಾನಿಗಳು ಯುರೋಪಿನ ವಿಜ್ಞಾನಿಗಳೊಂದಿಗೆ ಕೆಲಸ ಮಾಡಲಿದ್ದಾರೆ. ಸೂರ್ಯನ ಮಸುಕಾದ ಕರೋನಾ ಅಧ್ಯಯನ ನಡೆಯಲಿದೆ. ಸೌರ ಅಂಚಿಗೆ ಹತ್ತಿರವಿರುವ ಸೂರ್ಯನ ಮಸುಕಾದ ಕರೋನಾವನ್ನು ಅಧ್ಯಯನ ಮಾಡುವ ಸಾಮರ್ಥ್ಯ ವನ್ನು ಪ್ರೋಬಾ -3 ಹೊಂದಿದೆ. ಇದನ್ನು ಇಸ್ರೋ ನಿರ್ವಹಿಸುವ ಪಿಎಸ್ಎಲ್​ವಿ-ಎಕ್ಸ್ಎಲ್ ರಾಕೆಟ್ ಮೂಲಕ ಉಡಾವಣೆ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಸೂರ್ಯನ ಅಧ್ಯಯನ ನಡೆಸುವ ಯುರೋಪಿಯನ್ ಒಕ್ಕೂಟದ ದೊಡ್ಡ ಆರ್ಬಿಟರ್ ಪ್ರೊಬಾ 3 ಡಿಸೆಂಬರ್​ನಲ್ಲಿ ಶ್ರೀಹರಿಕೋಟಾದಿಂದ ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ. ಇಸ್ರೋ ಮತ್ತು ಯುರೋಪಿಯನ್ ಒಕ್ಕೂಟದ ಬಾಹ್ಯಾಕಾಶ ವಿಜ್ಞಾನಿಗಳು ಜಂಟಿಯಾಗಿ ಸೂರ್ಯನ ವಾತಾವರಣದ ಅಧ್ಯಯನ ಮಾಡಲಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಪ್ರೋಬಾ -3 ಮಿಷನ್ 2 ಉಪಗ್ರಹಗಳನ್ನು ಒಳಗೊಂಡಿದೆ. ಇದು ಸೌರ ಕರೋನಾಗ್ರಾಫ್ ಎಂದು ಕರೆಯಲ್ಪಡುವ 144 ಮೀಟರ್ ಉದ್ದದ ಸಾಧನವಾಗಿ ಕೆಲಸ ಮಾಡುತ್ತದೆ. ಸೂರ್ಯನ ಪ್ರಖರ ಬೆಳಕಿನಿಂದಾಗಿ ವೀಕ್ಷಿಸಲು ಕಷ್ಟಕರವಾದ ಸೂರ್ಯನ ಕರೋನಾವನ್ನು ಅಧ್ಯಯನ ಮಾಡಲು ಇದು ವಿಜ್ಞಾನಿಗಳಿಗೆ ಸಹಾಯ ಮಾಡುತ್ತದೆ. ವಿಶ್ವದ ಮೊದಲ ಈ ನಿಖರ ಫ್ಲೈಯಿಂಗ್ ಮಿಷನ್ ವ್ಯವಸ್ಥೆಯು ವಿಜ್ಞಾನಿಗಳಿಗೆ ಸೂರ್ಯನ ಅಸ್ಪಷ್ಟ ಕರೋನಾವನ್ನು ಅಭೂತಪೂರ್ವ ಸಾಮೀಪ್ಯ ಮತ್ತು ಸಮಗ್ರವಾಗಿ ಅಧ್ಯಯನ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಸಚಿವರು ನುಡಿದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು