ಇತ್ತೀಚಿನ ಸುದ್ದಿ
ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ ಗಾಯ
04/05/2024, 18:02
ವಿಟ್ಲ(reporterkarnataka.com): ಇಲ್ಲಿಗೆ ಸಮೀಪದ ಉರಿಮಜಲು ಎಂಬಲ್ಲಿ ಪುತ್ತೂರಿನಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್ಸೊಂದರ ಗಾಜು ಏಕಾಏಕಿಯಾಗಿ ಒಡೆದು ಇಬ್ಬರು ಬಾಲಕರು ಸೇರಿದಂತೆ ಮೂವರು ಗಾಯಗೊಂಡ ಘಟನೆ ಶನಿವಾರ ನಡೆದಿದೆ. ಬಿಸಿಲಿನ ತಾಪಕ್ಕೆ ಗಾಜು ಒಡೆದು ಹೋಗಿದೆ ಎನ್ನಲಾಗಿದೆ.
ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ಬಳಿ ಸಂಚರಿಸುತ್ತಿದ್ದ ವೇಳೆ ಬಸ್ಸಿನ ಗ್ಲಾಸ್ ಒಡೆದಿದೆ. ಈ ಘಟನೆಯಿಂದ ಬಸ್ಸಿನ ಮುಂಭಾಗದಲ್ಲಿದ್ದ ಒಬ್ಬ ಬಾಲಕ, ಚಾಲಕ ಹಾಗೂ ಇನ್ನೋರ್ವ ಮಗು ಗಾಯಗೊಂಡಿದೆ. ಬಾಲಕ ತೀವ್ರ ಗಾಯಗೊಂಡಿದ್ದು, ಆತನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.