5:37 AM Sunday18 - January 2026
ಬ್ರೇಕಿಂಗ್ ನ್ಯೂಸ್
88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,… ಕೊಡಗಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಹೈ ಅಲರ್ಟ್: ನೂತನ ಎಸ್ಪಿ ಬಿಂದುಮಣಿ ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ…

ಇತ್ತೀಚಿನ ಸುದ್ದಿ

ಸುರತ್ಕಲ್ ವಾರ್ಡ್: 60 ವರ್ಷಗಳಿಂದ ವಾಸಿಸುತ್ತಿರುವ 12 ಕುಟುಂಬಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ಹಕ್ಕುಪತ್ರ ವಿತರಣೆ

09/01/2025, 10:47

ಮಂಗಳೂರು(reporterkarnataka.com): ಮಹಾನಗರ ಪಾಲಿಕೆಯ ಸುರತ್ಕಲ್ ವಾರ್ಡ್ ನಂಬ್ರ 2ರಲ್ಲಿ ಕಳೆದ 60 ವರ್ಷಗಳಿಂದ ವಾಸಿಸುತ್ತಿರುವ 12 ಕುಟುಂಬಗಳಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಬುಧವಾರ ಹಕ್ಕುಪತ್ರ ವಿತರಿಸಿದರು.


ಖಾಸಗೀ ಜಮೀನಿನಲ್ಲಿ ನೆಲೆಸಿದ್ದ ಈ ಕುಟುಂಬಗಳಿಗೆ ಪಾಲಿಕೆಯು ಜಮೀನು ಖರೀದಿಸಿ ಭೂಮಿಯ ಒಡೆತನವನ್ನು ನೀಡಿದೆ.
ಹಕ್ಕು ಪತ್ರ ವಿತರಿಸಿ ಮಾತನಾಡಿದ ಶಾಸಕರು ಪ್ರತಿಯೊಬ್ಬರಿಗೂ ಸ್ವಂತ ಸೂರು ಹೊಂದುವ ಆಕಾಂಕ್ಷೆ ಇರುತ್ತದೆ. ನಿಮ್ಮ ಸಮಸ್ಯೆ ಕುರಿತಾಗಿ ಪಾಲಿಕೆ ಸದಸ್ಯರಲ್ಲಿ ತಿಳಿಸಿ ಹಕ್ಕು ಪತ್ರಕ್ಕೆ ಮನವಿ ಮಾಡಿದ ಮೇರೆಗೆ ಖಾಸಗೀ ಜಮೀನು ಖರೀದಿಸಲು ಸೂಚಿಸಿ ಅದರಂತೆ ನೀವು ವಾಸ ಮಾಡುತ್ತಿದ್ದ ಜಾಗ ನಿಮ್ಮದಾಗಿದೆ.ಅ„ಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ .ನಿಮ್ಮ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದರು.
ಮೇಯರ್ ಮನೋಜ್ ಕುಮಾರ್ ,ವಿಪಕ್ಷ ನಾಯಕ ಅನಿಲ್ ಕುಮಾರ್ ಅವರು ಮಾತನಾಡಿದರು.ಈ ಸಂದರ್ಭದಲ್ಲಿ ಉಪ ಮೇಯರ್ ಬಾನುಮತಿ, ಸ್ಥಾಯೀ ಸಮಿತಿ ಸದಸ್ಯರಾದ ವೀಣಾ ಮಂಗಳ, ಸುಮಿತ್ರ ಕರಿಯ, ಸರಿತ ಶಶಿಧರ್,ಶ್ವೇತ ಪೂಜಾರಿ, ನಯನ ಆರ್ ಕೋಟ್ಯಾನ್, ವೇದಾವತಿ, ಲಕ್ಷ್ಮೀ ಶೇಖರ್ ದೇವಾಡಿಗ, ವರುಣ್ ಚೌಟ,ಶೋಭಾ ರಾಜೇಶ್,ಪಾಲಿಕೆ ಅ„ಕಾರಿಗಳಾದ ವಿಭಾಗೀಯ ಆಯುಕ್ತ ಗುರುಪ್ರಸಾದ್, ಚಿತ್ತರಂಜನ್, ಮಾಲಿನಿ ರೋಡ್ರಿಗಸ್,ಸುಲತ,ರೇಖಾ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು