ಇತ್ತೀಚಿನ ಸುದ್ದಿ
ಸುರತ್ಕಲ್ ನಲ್ಲಿ ಚಿಕ್ಕಮಗಳೂರು ಪೊಲೀಸರಿಗೆ ಹಳಸಿದ ಊಟ ಆರೋಪ: ಇತ್ತಂಡ ಖಾಕಿಗಳ ಮಧ್ಯೆ ವಾಗ್ವಾದ
03/08/2022, 18:07

ಮಂಗಳೂರು/ಚಿಕ್ಕಮಗಳೂರು (reporterkarnataka.com): ಮಂಗಳೂರಿನಲ್ಲಿ ಪೊಲೀಸ್ ಬಂದೋಬಸ್ತ್ ಹೊರ ಜಿಲ್ಲೆಯಿಂದ ಬಂದ ಪೊಲೀಸರಿಗೆ ಹಳಸಿದ ಊಟ ಕೊಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಕುರಿತು ಇತ್ತಂಡಗಳ ಖಾಕಿಗಳ ಮಧ್ಯೆ ವಾಗ್ವಾದ ನಡೆದಿದೆ.
ಸುರತ್ಕಲ್ ನಲ್ಲಿ ಚಿಕ್ಕಮಗಳೂರು ಜಿಲ್ಲೆ ಪೊಲೀಸರಿಗೆ ಹಳಸಿದ ಆಹಾರ ನೀಡಿದ ಆರೋಪವನ್ನು ಅಲ್ಲಿನ ಪೊಲೀಸರು ಮಾಡಿದ್ದಾರೆ. ಹಳಸಿದ ಆಹಾರ ಸ್ವೀಕರಿಸದೇ ವಾಪಾಸ್ ಕಳುಹಿಸಿದ ಘಟನೆ ಸುರತ್ಕಲ್ ನ ಬಂಟರ ಭವನ ದಲ್ಲಿ ನಡೆದಿದೆ.
ದತ್ತಪೀಠ ಕರ್ತವ್ಯಕ್ಕೆ ಬಂದಾಗ ನೀವು ಕೂಡ ಹಾಗೆ ಮಾಡಿದ್ದೀರಿ. ಅದಕ್ಕೆ ನಾವು ಹಾಗೆ ಮಾಡುತ್ತಿದ್ದೇವೆ ಎಂದಿದ್ದಾರೆ ಅಂತ ಚಿಕ್ಕಮಗಳೂರು ಪೊಲೀಸರು ಅರೋಪ ಮಾಡಿದ್ದಾರೆ. ಈ ಕುರಿತು ಸುರತ್ಕಲ್ ಬಂಟರ ಭವನ ಸಮೀಪ ಪೊಲೀಸರ ನಡುವೆ ಕೆಲ ಹೊತ್ತು ವಾಗ್ವಾದ ನಡೆದಿದೆ. ಬಳಿಕ ಬೇರೆ ಊಟ ಸರಬರಾಜು ಮಾಡಲಾಗಿದೆ.