ಇತ್ತೀಚಿನ ಸುದ್ದಿ
ಸುರತ್ಕಲ್: ಭಾರೀ ಜನಸ್ತೋಮದ ಸಮ್ಮುಖದಲ್ಲಿ ಹತ್ಯೆಗೀಡಾದ ಫಾಝಿಲ್ ಅಂತ್ಯ ಕ್ರಿಯೆ; ಬಿಗಿ ಬಂದೋಬಸ್ತ್
29/07/2022, 14:41
ಮಂಗಳೂರು(reporterkarnataka.com): ದುಷ್ಕರ್ಮಿಗಳಿಂದ ಗುರುವಾರ ರಾತ್ರಿ ಸುರತ್ಕಲ್ ನಲ್ಲಿ.ಹತ್ಯೆಗೀಡಾದ ಮಹಮ್ಮದ್ ಫಾಝಿಲ್ ಅವರ ಅಂತ್ಯಸಂಸ್ಕಾರ ಮಂಗಳಪೇಟೆ ಮೊಹಿದ್ದೀನ್ ಜುಮಾ ಮಸೀದಿಯ ಕಬರ್ ಸ್ಥಾನದಲ್ಲಿ ಶುಕ್ರವಾರ ನಡೆಯಿತು.
ಮಂಗಳೂರು ಆಸ್ಪತ್ರೆಯಿಂದ ಪಾರ್ಥಿವ ಶರೀರವನ್ನು ಸುರತ್ಕಲ್ ಗೆ ತಂದು ಅಲ್ಲಿಂದ ಮಂಗಳಪೇಟೆ ಸಮೀಪದಲ್ಲಿರುವ ಮನೆಗೆ ಮೆರವಣಿಗೆ ಮೂಲಕ ಕರೆ ತರಲಾಯಿತು.
ಮನೆಗೆ ತಲುಪಿದ ಫಾಝಿಲ್ ಅವರ ಮೃತದೇಹದ ಸಾರ್ವಜನಿಕರ ಅಂತಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಪುರುಷರಿಗೆ ಅಂತಿಮ ದರ್ಶನಕ್ಕೆ ಮಂಗಳಪೇಟೆ ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ಅವಕಾಶ ಕಲ್ಪಿಸಲಾಯಿತು.
ಬಳಿಕ ಮಸೀದಿ ಕಬರ್ ಸ್ಥಾನದಲ್ಲಿ ದಫನ ಕಾರ್ಯ ನಡೆಯಿತು.