ಇತ್ತೀಚಿನ ಸುದ್ದಿ
Suprem Court | ಹನಿ ಟ್ರ್ಯಾಪಿಂಗ್: ಸ್ವತಂತ್ರ ತನಿಖೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸುಪ್ರೀಂ ಕೋರ್ಟ್ ತಿರಸ್ಕಾರ
27/03/2025, 12:17

ನವದೆಹಲಿ(reporterkarnataka.com): ಕರ್ನಾಟಕದಲ್ಲಿ ನಡೆದಿದೆ ಎನ್ನಲಾದ ಹನಿ ಟ್ರ್ಯಾಪಿಂಗ್ ಆರೋಪಗಳ ಸ್ವತಂತ್ರ ತನಿಖೆಗೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸಿಬಿಐ ಅಥವಾ ಎಸ್‌ಐಟಿ ತನಿಖೆಯ ಕೋರಿಕೆಯನ್ನು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಈಗ ನಡೆಯುತ್ತಿರುವ ರಾಜಕೀಯ ವಿವಾದದ ನಡುವೆ ರಾಜ್ಯದ ಅಧಿಕಾರಿಗಳಿಗೆ ಪ್ರಕರಣದ ಉಸ್ತುವಾರಿ ವಹಿಸಲಾಯಿತು.
ಕರ್ನಾಟಕದ ಶಾಸಕರು, ಸಾರ್ವಜನಿಕ ಸೇವಕರು ಮತ್ತು ನ್ಯಾಯಾಧೀಶರ ಹನಿ ಟ್ರ್ಯಾಪಿಂಗ್ ಆರೋಪದ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಲಾಗಿತ್ತು. ಆದರೆ ಈ ಕೋರಿಕೆಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.