4:31 PM Saturday29 - March 2025
ಬ್ರೇಕಿಂಗ್ ನ್ಯೂಸ್
Chikkamagaluru | ಬಾಲ ಹಿಡಿದು ಎತ್ತಿದ ಉರಗ ತಜ್ಞರು: ನುಂಗಿದ್ದ 10 ಮೊಟ್ಟೆಗಳನ್ನು… Speaker Talking | ವಿಧಾನ ಸೌಧಕ್ಕೆ ವರ್ಣರಂಜಿತ ದೀಪಾಲಂಕಾರ; ಯಾವಾಗ ಉದ್ಘಾಟನೆ?; ಸ್ಪೀಕರ್… ರಾಜ್ಯ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಕಪಿಮುಷ್ಟಿಯಲ್ಲಿದೆ: ಹಾಲು ದರ ಏರಿಕೆಗೆ ಕೇಂದ್ರ… ಕೋಲಾರ ಜಿಲ್ಲೆಯಲ್ಲಿ ಸುಮಾರು 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ; ತೇರಹಳ್ಳಿ… Protest in Delhi | ‘ಉದ್ಯೋಗ ಕೊಡಿ ಅಥವಾ ಅಧಿಕಾರ ತ್ಯಜಿಸಿ’: ಕೇಂದ್ರ… Medical College | ಗದಗ ಮೆಡಿಕಲ್ ಕಾಲೇಜಿಗೆ ಕೆ.ಎಚ್. ಪಾಟೀಲ್ ಹೆಸರು: ರಾಜ್ಯ… BJP Internal War | ಯಡಿಯೂರಪ್ಪ ಕುಟುಂಬದ ಕಟು ಟೀಕೆಕಾರ ಯತ್ನಾಳ್ ಗೆ… Protest | ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ನೀರು ಆಗ್ರಹಿಸಿ ಬೃಹತ್… ಮೂಡಿಗೆರೆ ಸುತ್ತಮುತ್ತ ಧಾರಾಕಾರ ಮಳೆ: ಬಾಳೂರಿನ ಕಲ್ಲಕ್ಕಿಯ ಮುಖ್ಯ ರಸ್ತೆಗೆ ಉರುಳಿದ ಮರ ನಮ್ಮ ಭಾರತೀಯ ಸಂಸ್ಕೃತಿ, ಆಯುರ್ವೇದ ದೇಶದ ಆಸ್ತಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಇತ್ತೀಚಿನ ಸುದ್ದಿ

Support Saturday | ಅನಿರ್ವೇದ ಸಂಸ್ಥೆಯಿಂದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ʻನೆರವಿನ ಶನಿವಾರʼ ಉಪಕ್ರಮಕ್ಕೆ ಚಾಲನೆ

26/03/2025, 13:16

ಮಂಗಳೂರು(reporterkarnataka.com): ನಗರದ ಮಾನಸಿಕ ಯೋಗಕ್ಷೇಮ ಸಂಪನ್ಮೂಲ ಕೇಂದ್ರ ಹಾಗೂ ಸರ್ಕಾರೇತರ ಸಂಸ್ಥೆ ಎನಿಸಿರುವ ʻಅನಿರ್ವೇದʼವು ನಗರದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ಉಚಿತ ಮತ್ತು ಅಂತರ್ಗತ ʻನೆರವಿನ ಶನಿವಾರʼ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ.


ಇಫ್ತಿಕಾರ್ ಆಲಿ (ಅಧ್ಯಕ್ಷರು, ಕರ್ನಾಟಕದ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್) ಅವರು ಮಂಗಳವಾರ ನಗರದಲ್ಲಿ ಅನಿರ್ವೇದದ ವಿಶೇಷ ಅಗತ್ಯತೆಯ ಮಕ್ಕಳ ಕೆಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಷ್ಠಾನದ ನಿರ್ದೇಶಕರಾದ ಡಾ. ಕೆ.ಟಿ. ಶ್ವೇತಾ ಅವರು ಈ ಕುರಿತು ಮಾಹಿತಿ ನೀಡಿ, ʻನೆರವಿನ ಶನಿವಾರʼ ಉಪಕ್ರಮವು 2025ರ ಮಾರ್ಚ್ 29ರಿಂದ ಪ್ರತಿ ಶನಿವಾರದಂದು ಮೋರ್ಗನ್ಸ್ ಗೇಟ್ ನಲ್ಲಿರುವ ಅನಿರ್ವೇದ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ʻನೆರವಿನ ಶನಿವಾರʼ ಉಪಕ್ರಮವು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಎ.ಎಸ್.ಡಿ), ಎ.ಡಿ.ಎಚ್.ಡಿ, ಕಲಿಕಾ ನ್ಯೂನತೆಗಳು, ಬೌದ್ಧಿಕ ವೈಕಲ್ಯತೆಗಳು ಮತ್ತು ಬೆಳವಣಿಗೆಗೆ ಸಂಬಂಧಿಸಿದ ಇತರ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಸುರಕ್ಷಿತ ಮತ್ತು ಪೋಷಣೆಗೆ ಒತ್ತು ನೀಡುವ ಪರಿಸರವನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಪೋಷಕರು, ಆರೈಕೆ ಒದಗಿಸುವವರು ಮತ್ತು ಸಮುದಾಯದ ಸದಸ್ಯರು ಈ ಉಪಕ್ರಮದಲ್ಲಿ ಪಾಲ್ಗೊಳ್ಳಲು ವಿನಂತಿಸಲಾಗಿದೆ. ಪೋಷಕರ ತರಬೇತಿ ಮತ್ತು ಸಮಾನಸ್ಕಂಧ ನೆರವು ಸಹ ಈ ಮೂಲಕ ಲಭ್ಯವಿದ್ದು, ಸಹಯೋಗದಿಂದ ಕೂಡಿದ ನೆರವು ಜಾಲವನ್ನು ಈ ಮೂಲಕ ರೂಪಿಸಲಾಗುವುದು.
ಮಂಗಳೂರಿನ ವಿಶೇಷ ಅಗತ್ಯತೆಯ ಮಕ್ಕಳ ಸಬಲೀಕರಣಕ್ಕಾಗಿ ನುರಿತ ವೃತ್ತಿಪರರೊಂದಿಗೆ ಕೈಜೋಡಿಸುವುದಕ್ಕಾಗಿ ಸ್ವಯಂಸೇವಕರಾಗಿ ಸೇವೆ ನೀಡಲು ʻನೆರವಿನ ಶನಿವಾರʼ ಉಪಕ್ರಮವು ಸಮುದಾಯದ ಸದಸ್ಯರಿಗೆ ಕರೆ ನೀಡಿದೆ.
ಹೆಚ್ಚಿನ ಮಾಹಿತಿಗಾಗಿ 9482186289 ಕ್ಕೆ ಕರೆ ಮಾಡಿರಿ ಅಥವಾ officialanirvedha@gmail.com ಗೆ ಸಂಪರ್ಕಿಸಿರಿ.
ಈ ಸಂಬಂಧ ಯಾವುದೇ ಪ್ರಶ್ನೆಗಳಿದ್ದಲ್ಲಿ ಅನಿರ್ವೇದ ಪ್ರತಿಷ್ಠಾನದ ನಿರ್ದೇಶಕರಾದ ಕೆ.ಟಿ ಶ್ವೇತಾ ಅವರನ್ನು 9902322985 ಮೂಲಕ ಸಂಪರ್ಕಿಸಬಹುದು.

ಇತ್ತೀಚಿನ ಸುದ್ದಿ

ಜಾಹೀರಾತು