ಇತ್ತೀಚಿನ ಸುದ್ದಿ
ಸುಳ್ಯ: ಮತ್ತೆ ಭೂಕಂಪನದ ಅನುಭವ; ಸ್ಥಳೀಯರಲ್ಲಿ ಆತಂಕ
09/12/2022, 10:15

ಸುಳ್ಯ(reporterkarnataka.com): ಇತ್ತೀಚೆಗಷ್ಟೇ ಸರಣಿ ಭೂಕಂಪನ ಕಂಡ ಸುಳ್ಯ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೆ ಭೂಕಂಪನದ ಅನುಭವವಾದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಅರೆ ಮಲೆನಾಡಿನಿಂದಾವೃತವಾಗಿರುವ ಸುಳ್ಯ ತಾಲೂಕಿನ ಮಡಪ್ಪಾ
ಡಿಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಮತ್ತೆ ಭೂಮಿ ಕಂಪಿಸಿದ ಹಿನ್ನೆಲೆಯಲ್ಲಿ ಜನರು ಆತಂಕಕ್ಕೀಡಾಗಿದ್ದಾರೆ.
ಮಡಪ್ಪಾಡಿ ಗ್ರಾಮದ ಕಡ್ಯ, ಹಾಡಿಕಲ್ಲು ಗ್ರಾಮದಲ್ಲಿ ಭಾರಿ ಶಬ್ದದೊಂದಿಗೆ
ಭೂಮಿ ನಡುಗಿದಂತಾಯಿತು ಎಂದು ಜನರು ಹೇಳಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಇಲ್ಲಿನ ಸಂಪಾಜೆ, ಚೆಂಬು, ಕರಿಕೆ, ಅರಂತೋಡು,
ತೊಡಿಕಾನ, ಪೆರಾಜೆ, ಗೂನಡ್ಕ ಸೇರಿದಂತೆ ಹಲವೆಡೆಗಳಲ್ಲೂ ಭೂಕಂಪನವಾಗಿತ್ತು.ಈ ಘಟನೆಯ ಬಗ್ಗೆ ಭೂವಿಜ್ಞಾನ ಅಧಿಕಾರಿಗಳಿಂ
ದ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.