8:26 AM Friday14 - November 2025
ಬ್ರೇಕಿಂಗ್ ನ್ಯೂಸ್
ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ…

ಇತ್ತೀಚಿನ ಸುದ್ದಿ

ಸುಳ್ಯ: 6 ಬಾರಿ ಗೆದ್ದ ಅಂಗಾರ ಎಲೆಕ್ಷನ್ ಪಾಲಿಟಿಕ್ಸ್ ಗೆ ಗುಡ್ ಬೈ ಹೇಳುತ್ತಾರಾ? ಶಶಿ ಸುಳ್ಳಿ ನೂತನ ಅಭ್ಯರ್ಥಿಯೇ?

09/04/2023, 19:54

ಸುಳ್ಯ(reporterkarnataka.com): ಆರು ಬಾರಿ ಗೆದ್ದು 30 ವರ್ಷಗಳಿಂದ ಸುಳ್ಯ ಕ್ಷೇತ್ರ ಪ್ರತಿನಿಧಿಸುತ್ತಿರುವ ಸಚಿವ ಅಂಗಾರ ಅವರಿಗೆ ಈ ಬಾರಿ ಕೊಕ್ ನೀಡುವ ಕುರಿತು ಬಿಜೆಪಿಯಲ್ಲಿ ತೀವ್ರ ಚಿಂತನೆ ನಡೆದಿದೆ ಎನ್ನಲಾಗಿದೆ. ಹಾಗಾದರೆ ಅಂಗಾರ ಅವರಿಗೆ ಪರ್ಯಾಯ ನಾಯಕರಾಗಿ ಸುಳ್ಯ ಬಿಜೆಪಿಯಿಂದ ಯಾರು ಮೂಡಿ ಬರಲಿದ್ದಾರೆ ಎಂಬ ಕೌತುಕ ಇಡೀ ಕರಾವಳಿಯಲ್ಲಿ ಆವರಿಸಿದೆ.
30 ವರ್ಷಗಳಿಂದ ಒಂದೇ ಪಕ್ಷವನ್ನು ಪ್ರತಿನಿಧಿಸಿ 6 ಬಾರಿ ಶಾಸಕರಾಗಿ, ಕೊನೆಗೂ ಸಚಿವರಾದ ಅಂಗಾರ ಅವರನ್ನು ಚುನಾವಣಾ ರಾಜಕೀಯದಿಂದ ನಿವೃತ್ತಿಗೊಳಿಸಲು ಜಿಲ್ಲಾ ಹಾಗೂ ರಾಜ್ಯಮಟ್ಡದ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಪಕ್ಷದ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೊಸ ತಲೆಮಾರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಪಕ್ಷ ಈ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ. ಹಾಗಾದರೆ ಅಂಗಾರ ಅವರಿಗೆ ಪರ್ಯಾಯ ಅಭ್ಯರ್ಥಿ ಯಾಗಿ ಬಿಜೆಪಿ ಯಾರನ್ನು ಆಯ್ಕೆ ಮಾಡಲಿದೆ? ಕಾಂಗ್ರೆಸ್ ತರಹ ಹೊರಗಿನಿಂದ ಅಭ್ಯರ್ಥಿಯನ್ನು ಆಮದು ಮಾಡಿಕೊಳ್ಳಲಿದೆಯೇ? ಅಲ್ಲ, ಸ್ಥಳೀಯ ಅಭ್ಯರ್ಥಿಯನ್ನೇ ಬೆಳೆಸಿ ನಾಯಕನಾಗಿ ಬೆಳೆಸಲಿದಯಾ ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರಕುತ್ತದೆ. ಅಕಸ್ಮಾತ್ ಅಂಗಾರ ಅವರ ಅಭ್ಯರ್ಥಿ ತನವನ್ನು ಬದಲಾಯಿಸಿದರೆ ಅವರ ಜಾಗಕ್ಕೆ ಸ್ಥಳೀಯ ವ್ಯಕ್ತಿಯನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗುತ್ತದೆ. ಇಂತಹ ಅಭ್ಯರ್ಥಿ ಗಳಲ್ಲಿ ಪ್ರಮುಖ ಹೆಸರು ಶಶಿಧರ ಸುಳ್ಳಿ ಯಾನೆ ಶಶಿ ಸುಳ್ಳಿ.
ಆರೆಸ್ಸೆಸ್ ಗರಡಿಯಲ್ಲಿ ಪಳಗಿದ ಶಶಿ ಸುಳ್ಳಿ ಎಂಬ ತರುಣನನ್ನು ಮುನ್ನಲೆಗೆ ತರಲು ಆರೆಸ್ಸೆಸ್ ಎಲ್ಲ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಸುಳ್ಳಿ ನಿವಾಸಿ ಶಶಿ ಸುಳ್ಳಿ ಪಿಯುಸಿ ಕಲಿತ ಆಟೋ ಚಾಲಕ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಕಾರ್ಯಕರ್ತ. ಸಂಘದ ಒಟಿಸಿಯನ್ನು ಪೂರೈಸಿದವರು. ಶಾಸಕ ಅಂಗಾರ ಅವರ ಕಾರು ಚಾಲಕನಾಗಿಯೂ ಸೇವೆ ಸಲ್ಲಿಸಿದ್ದಾರೆ. ಆರೆಸ್ಸೆಸ್ ನಾಯಕ ಮೈಚ ಜಯದೇವ ಅವರೊಂದಗೆ ದುಡಿದು ಅನುಭವ ಹೊಂದಿದವರು.

ಇತ್ತೀಚಿನ ಸುದ್ದಿ

ಜಾಹೀರಾತು