ಇತ್ತೀಚಿನ ಸುದ್ದಿ
Sullia | ಬಾವಿಗೆ ಬಿದ್ದ ಮಹಿಳೆ: ಆಟೋ ಚಾಲಕನಿಂದ ರಕ್ಷಣೆ; ಸಾರ್ವಜನಿಕರಿಂದ ಶ್ಲಾಘನೆ
26/12/2025, 19:46
ಸುಳ್ಯ(reporterkarnataka.com): ಬಾವಿಗೆ ಬಿದ್ದ ಮಹಿಳೆಯನ್ನು ಆಟೋ ಚಾಲಕ ರಕ್ಷಣೆ ಮಾಡಿದ ಘಟನೆ ಕಲ್ಲುಗುಂಡಿಯ ಕೈಪಡ್ಕ ಎಂಬಲ್ಲಿ ನಡೆದಿದೆ
ಡಿಸೆಂಬರ್ 23ರಂದು ಮಹಿಳೆಯೊಬ್ಬರು ಕೈಪಡ್ಕದಲ್ಲಿ ಬಾವಿಗೆ ಬಿದ್ದರು. ಈ ವಿಚಾರ ತಿಳಿದ ಆಟೋ ಚಾಲಕ ಗುರುಪ್ರಕಾಶ್ ತತ್‌ಕ್ಷಣ ಬಾವಿಗೆ ಹಾರಿ, ಇತರರ ಸಹಕಾರದಿಂದ ಮಹಿಳೆಯನ್ನು ಮೇಲಕ್ಕೆತ್ತಿದರು. ಆ ಬಳಿಕ ಮಹಿಳೆಯನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತು.
ಗುರುಪ್ರಕಾಶ್ ಅವರ ಸಕಾಲಿಕ ಮತ್ತು ಧೈರ್ಯಶಾಲಿ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.













