1:57 AM Wednesday3 - December 2025
ಬ್ರೇಕಿಂಗ್ ನ್ಯೂಸ್
ಸಿಎಂ ಸಿದ್ದರಾಮಯ್ಯ – ವೇಣುಗೋಪಾಲ್‌ ಭೇಟಿ ಬೆನ್ನಲ್ಲೇ ದೆಹಲಿಗೆ ಹಾರಿದ ಡಿಸಿಎಂ ಡಿ.ಕೆ.… ಅಧಿಕಾರ ಹಸ್ತಾಂತರ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ -‌ ಕೆ.ಸಿ. ವೇಣುಗೋಪಾಲ್ ಭೇಟಿ; ಮಾತುಕತೆ ಮಂಗಳೂರಿಗೆ ಆಗಮಿಸಿದ ಕೆ.ಸಿ. ವೇಣುಗೋಪಾಲ್: ಡಿಕೆ ಪರ ಘೋಷಣೆ ಕೂಗಿದ ಕೈ ಕಾರ್ಯಕರ್ತರು Kodagu | ವಿರಾಜಪೇಟೆಯ ಕರಡಿಗೋಡುನಲ್ಲಿ ಕಾಡಾನೆಗಳ ಉಪಟಳ: ಬೆಳೆ ನಾಶ ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು…

ಇತ್ತೀಚಿನ ಸುದ್ದಿ

ಸುಬ್ರಹ್ಮಣ್ಯ ಪರಾಡ್ಕರ್ ಗೆ ವಿಪ್ರಭೂಷಣ ಪ್ರಶಸ್ತಿ: ನಾಳೆ ಅಶ್ವತ್ಥಪುರದಲ್ಲಿ ಪ್ರದಾನ

04/05/2022, 11:06

ಮೂಡುಬಿದರೆ(reporterkarnataka.com): ನಾರಾಯಣಾನಂದ ಸರಸ್ವತಿ ಸ್ವಾಮಿ ಟ್ರಸ್ಟ್ ವತಿಯಿಂದ ನೀಡಲಾಗುವ 

ವಿಪ್ರ ಭೂಷಣ ಪ್ರಶಸ್ತಿ ಈ ಬಾರಿ ವೇದಮೂರ್ತಿ‌ ಸುಬ್ರಹ್ಮಣ್ಯ ಭಟ್ ಪರಾಡ್ಕರ್ ಅವರಿಗೆ ಲಭಿಸಿದೆ. 

ಮೇ 5ರಂದು ಸಂಜೆ 4 ಗಂಟೆಗೆ ಅಶ್ವತ್ಥಪುರ ಶ್ರೀಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು  ಮ್ಯಾನೇಜಿಂಗ್ ಟ್ರಸ್ಟಿ ಯಜ್ಞೇಶ್ವರ ಭಟ್ ತಿಳಿಸಿದ್ದಾರೆ.

ಕಟೀಲು ಆನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ, ಆಶ್ವತ್ಥಪುರ ಕ್ಷೇತ್ರ ಆಡಳಿತ ಮೊಕ್ತೇಸರ ಎಲ್.ವಿ. ರಘುನಾಥ್ ಭಟ್, ಟ್ರಸ್ಟಿ ಕಿರಣ್ ಮಂಜನಬೈಲ್, ಉಡುಪಿ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚೈತನ್ಯ ಎಂ.ಜಿ., ಸಂಸ್ಕೃತ ವಿದ್ವಾಂಸ ಎ.ವಿದ್ಯನಾಥ ಶಾಸ್ತ್ರಿ ಜೋಶಿ ಭಾಗವಹಿಸುವರು. 

ಬಳಿಕ ಕದ್ರಿ ಯಕ್ಷ ಕೂಟ ವತಿಯಿಂದ ರಾಮಚಂದ್ರ ಭಟ್ ಎಲ್ಲೂರು ನಿರ್ದೇಶನದಲ್ಲಿ, ಜಿತೇಂದ್ರ ಕುಂದೇಶ್ವರ ಸಂಯೋಜನೆಯಲ್ಲಿ “ಶಶಿಪ್ರಭಾ ಪರಿಣಯ” ಕಾಲಮಿತಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. 
ವೇದಮೂರ್ತಿ
ಶಿವಾನಂದ ಕೆ. ನೇತೃತ್ವದಲ್ಲಿ ಪ್ರಶಸ್ತಿ ಪುರಸ್ಕೃತರ ಪುರ ಮೆರವಣಿಗೆ ನಡೆಯಲಿದೆ. ರಾಜೇಶ್ವರ ಭಟ್, ವಿಷ್ಣು ಮೂರ್ತಿ ಭಟ್, ಛಾಯಾಪತಿ ಕಂಚಿಬೈಲ್ ಭಾಗವಹಿಸುವರು.

ಇತ್ತೀಚಿನ ಸುದ್ದಿ

ಜಾಹೀರಾತು