ಇತ್ತೀಚಿನ ಸುದ್ದಿ
ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ
03/05/2024, 23:53
ಸುಬ್ರಹ್ಮಣ್ಯ(reporterkarnataka.com); ಕೇವಲ 15 ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕರೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ ದಾರುಣ ಘಟನೆ ಸುಬ್ರಹ್ಮಣ್ಯ ಸಮೀಪ ನಡೆದಿದೆ.
ಸುಬ್ರಹ್ಮಣ್ಯ ಗ್ರಾಮದ ಹೊಸೋಳಿಕೆ ಪರ್ವತಮುಖಿ ನಿವಾಸಿ ದಿ ಸಾಂತಪ್ಪ ಗೌಡ ಅವರ ಪುತ್ರ ಸೋಮ ಸುಂದರ್ (34) ಮೃತಪಟ್ಟ ದುರ್ದೈವಿ.
ಶುಕ್ರವಾರ ಸಂಜೆ ಸುಬ್ರಹ್ಮಣ್ಯ ಪರಿಸರದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಿದ್ದು, ಅಂಗಲದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ರಾಶಿ ಮಾಡುತ್ತಿದ್ದ ವೇಳೆ ಸೋಮ ಸುಂದರ್ ಅವರಿಗೆ ಸಿಡಿಲು ಬಡಿದಿದೆ. ಮಿಂಚಿತ ಆಘಾತಕ್ಕೆ ಅಸ್ವಸ್ಥಗೊಂಡ ಅವರನ್ನು ತಕ್ಷಣ ಕಡಬದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದುರೂ ಅವರು ಕೊನೆಯುಸಿರೆಳೆದಿದ್ದಾರೆ. ಸೋಮ ಸುಂದರ್ ಅವರು
ಏ 18 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರು ಸುಬ್ರಹ್ಮಣ್ಯ ಸಮೀಪ ಕಾರ್ ವಾಷಿಂಗ್ ಉದ್ಯಮ ನಡೆಸಿಕೊಂಡಿದ್ದರು. ಮೃತರು ಪತ್ನಿ ತಾಯಿ,ತಂಗಿಯನ್ನು ಅಗಲಿದ್ದಾರೆ.














