8:00 AM Thursday10 - July 2025
ಬ್ರೇಕಿಂಗ್ ನ್ಯೂಸ್
ಮಂಗಳೂರಿನ ಪೆಟ್ರೋಲಿಯಂ ಕಂಪನಿಗಳ ಸಂಬಂಧಿತ ದುರಂತ ನಿರ್ವಹಣೆಗೆ ಅಗ್ನಿಶಾಮಕ ಇಲಾಖೆಯ ಸಶಕ್ತಗೊಳಿಸಲಾಗಿದೆ: ಗೃಹ… ಕೊಪ್ಪ ಮೊರಾರ್ಜಿ‌ ವಸತಿ ಶಾಲೆಯ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಪ್ರಿನ್ಸಿಪಾಲ್, ವಾರ್ಡನ್ ಅಮಾನತು:… ಕೊಲೆ ಪ್ರಕರಣ: ಯೆಮೆನ್‌ನಲ್ಲಿ ಮರಣ ದಂಡನೆಗೆ ಒಳಗಾಗಿರುವ ಕೇರಳದ ನರ್ಸ್ ನಿಮಿಷಾಗೆ ಜುಲೈ… ನಂಜ ಈ ಪಣಿ ಮಾಡಿತಾಮಿ ಸಾರೂ: ವಿರಾಜಪೇಟೆ ಶಾಸಕರ ಮುಂದೆ ಕೆದರಿದ ಕೂದಲಿನ,… ಪುನರ್ವಸು ಮಳೆ ಅಬ್ಬರ: ಕೊಚ್ಚಿ ಹೋಗುವ ಭೀತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ! ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ…

ಇತ್ತೀಚಿನ ಸುದ್ದಿ

ಸ್ಟೇಟ್ ಬ್ಯಾಂಕ್ ಬಳಿಯ ಸಿಟಿ ಬಸ್ ತಂಗುದಾಣ ನಾಳೆಯಿಂದ ಸರ್ವಿಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರ: ಖಾಸಗಿ ಬಸ್ ಮಾಲೀಕರ ಸಂಘ ಜತೆ ಪೊಲೀಸ್ ಇಲಾಖೆ ತುರ್ತುಸಭೆ

31/03/2023, 22:00

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ನಗರದ ಸ್ಟೇಟ್ ಬ್ಯಾಂಕ್ ಪ್ರದೇಶದಲ್ಲಿ ವಾಹನ ದಟ್ಟಣೆ ತಪ್ಪಿಸಲು, ಅಪಘಾತ ನಿಯಂತ್ರಿಸಲು ಹಾಗೂ ಖಾಸಗಿ ಬಸ್ ಚಾಲಕರ ನಿರ್ಲಕ್ಷ್ಯ ಚಾಲನೆಯನ್ನು ತಡೆಯುವ ನಿಟ್ಟಿನಲ್ಲಿ ಸಿಟಿ ಬಸ್ ನಿಲ್ದಾಣವನ್ನು ಪ್ರಾಯೋಗಿಕ ನೆಲೆಯಲ್ಲಿ ನಾಳೆಯಿಂದ(ಏಪ್ರಿಲ್ 1) ಸ್ಟೇಟ್ ಬ್ಯಾಂಕ್ ಬಳಿಯ ಹಾಕಿ ಗ್ರೌಂಡ್ ಸರ್ವಿಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗುವುದು.


ಮಂಗಳೂರು ನಗರದ ವಿವಿಧ ಕಡೆಗಳಿಂದ ಸ್ಟೇಟ್ ಬ್ಯಾಂಕ್ ಕಡೆ ಬರುವ ಸಿಟಿ ಬಸ್ ಗಳು ಪೊಲೀಸ್ ಕಮಿಷನರ್ ಕಚೇರಿ ಎದುರುಗಡೆ ಇರುವ ರಸ್ತೆ ಮೂಲಕ ನೇರವಾಗಿ ಸರ್ವಿಸ್ ಬಸ್ ನಿಲ್ದಾಣದೊಳಗೆ ಪ್ರವೇಶಿಸಲು ಅನುವು ಮಾಡಿಕೊಡಲಾಗುವುದು. ಹಾಗಾಗಿ ಇನ್ನು ಮುಂದೆ ಸಿಟಿ ಬಸ್ ಗಳಿಗೆ ಹ್ಯಾಮಿಲ್ಟನ್ ಸರ್ಕಲ್ ನತ್ತ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಖಾಸಗಿ ಬಸ್ ಮಾಲೀಕರ ಸಂಘ, ಆರ್.ಟಿ.ಒ ಅಧಿಕಾರಿಗಳು ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ಸಭೆ ಶುಕ್ರವಾರ ನಡೆದಿತ್ತು. ಬೆಂದೂರ್ ವೆಲ್ ಬಳಿ ಖಾಸಗಿ ಬಸ್ ಗಳ ಧಾವಂತಕ್ಕೆ ವಾರದೊಳಗೆ ಎರಡು ಜೀವ ಹಾನಿಯಾಗಿರುವುದು ಮತ್ತು ಮಾಧ್ಯಮ ಹಾಗೂ ಸಾರ್ವಜನಿಕರಿಂದ ಕಂಡು ಬಂದ ವಿರೋಧದ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಅವರು ಶುಕ್ರವಾರ ತುರ್ತು ಸಭೆ ಕರೆದಿದ್ದರು. ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ಚಾಲನೆಯ ಬಗ್ಗೆ ಸಭೆಯಲ್ಲಿ ಖಾಸಗಿ ಬಸ್ ಮಾಲೀಕರ ಸಂಘಕ್ಕೆ ಎಚ್ಚರಿಕೆ ನೀಡಲಾಯಿತು. ಹಾಗೆ ಕಂಕನಾಡಿ ಹಾಗೂ ಬೆಂದೂರ್ ವೆಲ್ ಪ್ರದೇಶದಲ್ಲಿ ಸಿಟಿ ಬಸ್ ನಿಲುಗಡೆಯ ಕೆಲವು ಜಾಗವನ್ನು ಬದಲಾಯಿಸಲು ತೀರ್ಮಾನಿಸಲಾಯಿತು.
ಈ ನಡುವೆ ಪೊಲೀಸ್ ಅಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದ ಪದಾಧಿಕಾರಿಗಳು ಮತ್ತು ಆರ್ ಟಿ ಒ ಅಧಿಕಾರಿಗಳು ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಿಟಿ ಬಸ್ ಗಳು ತಂಗುವ ಕುರಿತು ಸ್ಥಳ ಪರಿಶೀಲನೆ ನಡೆಸಿದರು. ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಎಸಿಪಿ ಗೀತಾ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.
ಸ್ಟೇಟ್ ಬ್ಯಾಂಕ್ ಬಳಿ ರಸ್ತೆ ಕಾಂಕ್ರೀಟಿಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಸಿಟಿ ಬಸ್ ನಿಲ್ದಾಣವನ್ನು ಸರ್ವಿಸ್ ಬಸ್ ನಿಲ್ದಾಣದೊಳಗೆ ಸ್ಥಳಾಂತರಿಸಲಾಗಿತ್ತು. ಆದರೆ ಆಗ ಸರ್ವಿಸ್ ಬಸ್ ನಿಲ್ದಾಣ ನವೀಕರಣ ನಡೆದಿರಲಿಲ್ಲ. ಇದೀಗ ಸ್ಮಾರ್ಟ್ ಸಿಟಿ ಫಂಡ್ ನಲ್ಲಿ ಸರ್ವಿಸ್ ಬಸ್ ನಿಲ್ದಾಣವನ್ನು ನವೀಕರಣ ಮಾಡಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು