ಇತ್ತೀಚಿನ ಸುದ್ದಿ
ರಾಜ್ಯ ಬಜೆಟ್ | ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿ
06/03/2026, 13:02
ಬೆಂಗಳೂರು(reporterkarnataka.com): ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿ ಮಾಡಲಾಗುವುದು.
1. ಆರೋಗ್ಯ ಇಲಾಖೆಯ ಮೂಲಸೌಕರ್ಯ ಅಭಿವೃದ್ಧಿಗಾಗಿ 900 ಕೋಟಿ ರೂ
2. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ತುರ್ತು ಚಿಕಿತ್ಸಾ ವಿಭಾಗಗಳ ಮೇಲ್ದರ್ಜೆಗಾಗಿ 45 ಕೋಟಿ ರೂ
3. ಕಡಿಮೆ ಜನನ ತೂಕದ ಹಾಗೂ ಅನಾರೋಗ್ಯ ಪೀಡಿತ ಶಿಶುಗಳ ಸಮಗ್ರ ಹಾರೈಕೆಗೆ 10 ಕೋಟಿ ರೂಪಾಯಿ
4. 18 ವರ್ಷದವರೆಗಿನ types -1 diabetes ಮಕ್ಕಳ ಆರೋಗ್ಯ ಸುಧಾರಣೆಗೆ ಉಚಿತ ಇನ್ಸುಲಿನ್ ಪೆನ್ ಗಳ ವಿತರಣೆ
5.KMERC ಅನುದಾನದಡಿ ಗಣಿ ಬಲಿತ ಜಿಲ್ಲೆಗಳಾದ ಬಳ್ಳಾರಿ ವಿಜಯನಗರ ಚಿತ್ರದುರ್ಗ ಮತ್ತು ತುಮಕೂರಿನ ಎಲ್ಲಾ ತಾಲೂಕುಗಳಲ್ಲಿ ಸಮಗ್ರ ಆರೋಗ್ಯ ಸೇವೆ ವಿಸ್ತರಣೆ
6. 50 ಡಯಾಲಿಸಿಸ್ ಕೇಂದ್ರಗಳ ಹಾಸಿಗೆ ಸಾಮರ್ಥ್ಯ ಹೆಚ್ಚಳ: ವಾರ್ಷಿಕ 1.35 ಲಕ್ಷ ಹೆಚ್ಚುವರಿ ಡಯಾಲಿಸಿಸ್ ಸೇವೆಗಾಗಿ 20 ಕೋಟಿ ರೂ












