6:37 PM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಶ್ರೀನಿವಾಸಪುರ; ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪರವಾನಿಗೆ ಪಡೆದುಎಂ.ಜಿ. ರಸ್ತೆಯಲ್ಲಿ ಅವರೇಕಾಯಿ ವಹಿವಾಟು: ಕ್ರಮಕ್ಕೆ ಆಗ್ರಹ

04/01/2024, 21:55

ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪರವಾನಿಗೆ ಪಡೆದು ಎಂ.ಜಿ. ರಸ್ತೆಯಲ್ಲಿ ಅವರೇಕಾಯಿ ವಹಿವಾಟು ನಡೆಸುತ್ತಿರುವ ಪರವಾನಿಗೆದಾರರ ವಿರುದ್ದ ಕ್ರಮಕೈಗೊಂಡು ಅವರೆ ಕಾಯಿ ವಹಿವಾಟನ್ನು ಮಾರುಕಟ್ಟೆಗೆ ಸ್ಥಳಾಂತರಿಸಿ ಇಲ್ಲವೆ ಸೂಕ್ತವಾದ ಜಾಗ ಗುರುತಿಸಿ ಜನ ಸಾಮಾನ್ಯರಿಗೆ ಹಾಗೂ ರೈತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆಂದು ರೈತ ಸಂಘದಿಂದ ಇಂದ್ರಾ ಭವನ ಸರ್ಕಲ್‍ನಲ್ಲಿ ಅವರೆಕಾಯಿ ಸಮೇತ ಹೋರಾಟ ಮಾಡಿ ತಾಲ್ಲೂಕು ದಂಡಾಧಿಕಾರಿಗಳು ಎ.ಪಿ.ಎಂ.ಸಿ. ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತ ಮೂರು ತಿಂಗಳು ಭೂಮಿ ತಾಯಿಗೆ ಕಷ್ಟಾಪಟ್ಟು ರೋಗ ನಿಯಂತ್ರಣಕ್ಕೆ ಔಷಧಿಗಳನ್ನು ಸಿಂಪಡಣೆ ಮಾಡಿ ಬೆಳೆದಿರುವ ಅವರೇಕಾಯಿ ಮಾರಾಟಕ್ಕೆ ಸೂಕ್ತವಾದ ಮಾರುಕಟ್ಟೆ ವ್ಯವಸ್ಥೆ ಇದ್ದರೂ, ಕಾರ್ಯದರ್ಶಿಗಳು ಹಾಗೂ ಆಡಳಿತ ಅಧಿಕಾರಿಗಳು ಬೇಜವಾಬ್ದಾರಿಯಿಂದ ಪರವಾನಿಗೆದಾರರ ಕಾನೂನಿನ ಭಯವಿಲ್ಲದೆ, ರಾಜಾರೋಷವಾಗಿ ಎಂ.ಜಿ. ಮಾರುಕಟ್ಟೆಯಲ್ಲಿ ಅವರೇ ಕಾಯಿ ವಹಿವಾಟು ನಡೆಸಿ ಮಾರುಕಟ್ಟೆಗೆ ಬರುವ ಶುಲ್ಕ ಹಾಗೂ ರೈತರಿಗೆ ಸೂಕ್ತವಾದ ಬೆಲೆ ನೀಡದೆ ಹರಾಜುನಲ್ಲಿ ಹಾಗೂ ತೂಕದಲ್ಲಿ ಮೋಸ ಮಾಡುತ್ತಿದ್ದರೂ ಕಣ್ಣಿದ್ದು, ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಅವ್ಯವಸ್ಥೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಮೂರು ತಿಂಗಳು ಕಷ್ಟಾಪಟ್ಟು ಬೆಳೆದ ಅವರೇಕಾಯಿ 30 ನಿಮಿಷ್ಯದಲ್ಲಿ ಹರಾಜು ಹಾಕಿ 10 ರೂಪಾಯಿ ಕಾನೂನು ಬಾಹಿರ ಕಮೀಷನ್ ಪಡೆದು 100 ಕ್ಕೆ 5 ಕೆಜಿ ಲೆಸ್ ಮಾಡಿ ರೈತರನ್ನು ವ್ಯಾಪಾರಸ್ಥರು ವಂಚನೆ ಮಾಡುತ್ತಿದ್ದರೂ, ಅಧಿಕಾರಿಗಳು ವ್ಯಾಪಾರಸ್ಥರ ಜೊತೆ ಶಾಮೀಲಾಗಿ ರೈತರ ಬೆವರ ಹನಿಯ ಕಷ್ಟವನ್ನು ಕಸಿಯುತ್ತಿದ್ದಾರೆ. ಏಕೆಂದರೆ ರೈತರು ಬೆಳೆದ ಬೆಳೆಯನ್ನು ಅಧಿಕಾರಿಗಳು ಕಷ್ಟಾಪಡದೆ ಮೂರು ಹೊತ್ತು ಹೊಟ್ಟೆ ತುಂಬಾ ತಿನ್ನುತ್ತಾರೆಲ್ಲಯೇ ಅದೇ ರೈತರು ಮಾಡಿದ ತಪ್ಪು ರೈತರ ಕಷ್ಟ ತಿಳಿದಿದ್ದರೆ, ಅವರೆಕಾಯಿ ವಹಿವಾಟನ್ನು ಕಾನೂನುಬಾಹಿರವಾಗಿ ನಡೆಸುತ್ತಿರುವ ವಿರುದ್ದ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಾಕತ್ತು ಇಲ್ಲವೆಂದು ಪ್ರಶ್ನೆ ಮಾಡಿದರು.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ ಅಧಿಕಾರಿಗಳನ್ನು ಕೇಳಿದೆರ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿಯಾಗಿದೆ. ಪರವಾನಿಗೆದಾರರು ನಮ್ಮ ನಿಯಂತ್ರಣದಲ್ಲಿಲ್ಲ ಎಂದು ಬೆಕ್ಕಿನ ಕಥೆ ಹೇಳುತ್ತಿದ್ದಾರೆ. ಅವರೆಕಾಯಿ ವಹಿವಾಟು ಎಂ.ಜಿ.ರಸ್ತೆಯಲ್ಲಿ ನಡೆಯುತ್ತಿರುವುದರಿಂದ ಟ್ರಾಪಿಕ್ ಸಮಸ್ಯೆಯ ಜೊತೆಗೆ ಹರಾಜು ಸಮಯದಲ್ಲಿ ಜನಸಂದಣಿ ಹೆಚ್ಚಾಗಿ ಅಪಘಾತಗಳು ಸಂಭವಿಸಿ ಪೊಲೀಸ್ ಠಾಣೆ ಮೆಟ್ಟಲು ಏರುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದರು.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇಕೆ. ಪರವಾನಿಗೆದಾರರು ಕಾನೂನಿನ ಭಯವಿಲ್ಲದ ಜೊತೆಗೆ ನಮಗೆ ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲ ವಿದೆ ಎಂದು ಅಧಿಕಾರಿಗಳ ವಿರುದ್ದವೆ ಸಾರ್ವಜನಿಕವಾಗಿ ಮಾತನಾಡುತ್ತಿದ್ದರೂ, ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ ಅಸಮದಾನ ವ್ಯಕ್ತಪಡಿಸಿದರು.
ಅವರೆಕಾಯಿ ವಹಿವಾಟು ನಡೆಸುತ್ತಿರುವ ಕೆಲವರು ಯಾವುದೇ ಪರವಾನಿಗೆ ಪಡೆದಿಲ್ಲ. ಆದರೂ ಸಹ ರಾಜಾರೋಷವಾಗಿ ವಹಿವಾಟು ನಡೆಸುತ್ತಿದ್ದಾರೆ. ಇದರಿಂದ ರೈತರಿಗೆ ಹಣದಲ್ಲಿ ಮೋಸವಾದರೆ ಯಾರಿಗೆ ದೂರು ಕೊಡಬೇಕು. ಅಧಿಕಾರಿಗಳನ್ನು ಕೇಳಿದರೆ ನಮ್ಮ ವ್ಯಾಪ್ತಿಗೆ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ನಿಮ್ಮ ವ್ಯಾಪ್ತಿಗೆ ಬರಲ್ಲ ಎಂದರೆ ದಯವಿಟ್ಟು ಎ.ಪಿ.ಎಂ.ಸಿ.ಯನ್ನು ಬೀಗ ಹಾಕಿ ಮನೆಗೆ ತೆರಳಿ ಆಯಾಗಿರಿ ಎಂದು ಸಲಹೆ ನೀಡಿದರು.
48 ಗಂಟೆಯಲ್ಲಿ ಎಂ.ಜಿ.ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವಹಿವಾಟನ್ನು ಎ.ಪಿ.ಎಂ.ಸಿ. ಸ್ಥಳಾಂತರಿಸಿ ಇಲ್ಲವೆ ಸೂಕ್ತವಾದ ಜಾಗವನ್ನು ನಿಗದಿ ಮಾಡಿ ರೈತರಿಗೆ ಹರಾಜು ಹಾಗೂ ತೂಕದಲ್ಲಿ ಆಗುತ್ತಿರುವ ಮೋಸವನ್ನು ತಪ್ಪಿಸಿ ಇಲ್ಲವಾದರೆ ಅವರೆ ಕಾಯಿ ಸಮೇತ ಸಂಬಂಧಪಟ್ಟ ಅಧಿಕಾರಿಗಳ ಮನೆ ಮುಂದೆ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ದಂಡಾಧಿಕಾರಿಗಳು ಎ.ಪಿ.ಎಂ.ಸಿ. ಅಧಿಕಾರಿಗಳು ಅವರೆಕಾಯಿ ವಹಿವಾಟು ನಡೆಸುತ್ತಿರುವ ಪರವಾನಿಗೆದಾರರಿಗೆ ಎಷ್ಟೇ ನೋಟಿಸ್ ನೀಡಿದರು ಬದಲಾಗುತ್ತಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆ ಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಆಲವಾಟ ಶಿವು, ದ್ಯಾವಂಡಹಳ್ಳಿ ರಾಜೇಂದ್ರ, ಹುಲ್ಲಪ್ಪ, ಶೇಕ್‍ಷಪಿವುಲ್ಲಾ, ಸಹದೇವಣ್ಣ, ಮಂಗಸಂದ್ರ ತಿಮ್ಮಣ್ಣ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಸುಪ್ರಿಂ ಚಲ, ವಿನು, ಗಿರೀಶ್, ಮುಂತಾದವರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು