ಇತ್ತೀಚಿನ ಸುದ್ದಿ
ಜುಲೈ 10ರಂದು ಮಹಾಂತೇಶ ಕವಟಗಿ ಮಠಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ
03/07/2025, 13:00

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಬೆಳಗಾವಿ ಜಿಲ್ಲಾ ರಾಮದುರ್ಗ ತಾಲೂಕಿನ ಕಟಕೋಳ ಎಂ ಚಂದರಗಿ ಸಂಸ್ಥಾನ ಹಿರೇಮಠದಲ್ಲಿ ಜುಲೈ 10ರಂದು ಗುರು ಪೂರ್ಣಿಮಾ ನಿಮಿತ್ಯವಾಗಿ ತಪೋಭೂಷಣ ಶಿವಾಚಾರ್ಯ ರತ್ನ ಶ್ರೀ .ಷ.ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ಹಾಗೂ ಷ.ಬ್ರ.ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹುಕ್ಕೇರಿ ಬೆಳಗಾವಿ ಅವರ ಸಮ್ಮುಖದಲ್ಲಿ
ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಗೆ ಆಯ್ಕೆಯಾದ ರಾಜ್ಯ ಸರಕಾರದ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿ ಮಠ ಅವರಿಗೆ ಶ್ರೀಗಳು ಪ್ರಶಸ್ತಿ ಪ್ರದಾನ ಮಾಡುವರು.
ಇವರ ತಂದೆಯವರು ರಾಜಕೀಯ ಪ್ರಭಾವಿಗಳು ಶ್ರೀಗಳಿಗೆ ಮಠಗಳಿಗೆ ಅಪಾರವಾದ ಪ್ರೀತಿ ಕೊಡುಗೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ನಾಡಿನ ಹರ ಗುರು ಚರಮೂರ್ತಿಗಳು ಸರ್ವಧರ್ಮ ಸದ್ಭಕ್ತರು ಮಠದ ಶಿಷ್ಯ ವೃಂದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮಠದ ಆಡಳಿತ ಅಧಿಕಾರಿಯಾದ
ಡಿ.ವಾಯ್ ಮಾಢಳ್ಳಿ ಪತ್ರಿಕಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಅನೇಕ ಮಠಾಧೀಶ ಶರಣರು ಪೂಜ್ಯರು ಪಾಲ್ಗೊಳ್ಳುವರು.