ಇತ್ತೀಚಿನ ಸುದ್ದಿ
ಸೂಡಾದ ಕ್ರಷರ್ ನಲ್ಲಿ ಕಂದಕಕ್ಕೆ ಟಿಪ್ಪರ್ ಲಾಗ: ಚಾಲಕ ದಾರುಣ ಸಾವು
04/08/2022, 12:01
ಕಾರ್ಕಳ(reporterkarnataka.com):
ಕ್ರಷರ್ ನಲ್ಲಿ ಟಿಪ್ಪರ್ ಹಿಂದಕ್ಕೆ ತೆಗೆಯುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಚಾಲಕ ಸಾವನ್ನಪ್ಪಿದ ಘಟನೆ ಸೂಡ ಗ್ರಾಮದಲ್ಲಿ ನಡೆದಿದೆ.
ಮಹಮ್ಮದ್ ಆಸಿಫ್ (25)ಮೃತ ಚಾಲಕ. ಸೂಡ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಕ್ರಷರ್ ಸಮೀಪದಲ್ಲಿ ಹಿಂದಕ್ಕೆ ಲಾರಿ ಹಿಂದಕ್ಕೆ ತೆಗೆಯುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಆಳಕ್ಕೆ
ಬಿದ್ದ ಪರಿಣಾಮ ಟಿಪ್ಪರ್ ಚಾಲಕ ಸಾವನ್ನಪ್ಪಿದಾನೆ.. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.