ಇತ್ತೀಚಿನ ಸುದ್ದಿ
ಸೂಡ: ಅಡುಗೆ ಕೋಣೆಯಲ್ಲಿ ಕುಸಿದು ಬಿದ್ದು ಸಂಧಿವಾತದಿಂದ ಬಳಲುತ್ತಿದ್ದ ವ್ಯಕ್ತಿ ಸಾವು
21/09/2022, 21:10

ಶಿರ್ವ(reporterkarnataka.com): ಕುಸಿದು ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸೂಡ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸೂಡ ಗ್ರಾಮದ ಪೆರ್ನಾಲ್ ನಿವಾಸಿ 59 ವರ್ಷದ ಫೆಲಿಕ್ಸ್ ನಜರತ್ ಎಂದು ಗುರುತಿಸಲಾಗಿದೆ. ಇವರು ಕಾಲು ನೋವಿನಿಂದ ಬಳಲುತ್ತಿದ್ದು, ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಪತ್ನಿ ಸಂಧಿವಾತದಿಂದ ಬಳಲುತ್ತಿದ್ದು, ಆಕೆಯ ತಾಯಿ ಮನೆಯಾದ ಶಿರ್ವದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸೆ.20ರಂದು ಫೆಲಿಕ್ಸ್ ನಜರತ್ ಮನೆಯ ಅಡಿಗೆ ಕೋಣೆಯ ನೆಲದಲ್ಲಿ ಕುಸಿದುಬಿದ್ದಿದ್ದು, ಉಪಚರಿಸಿದಾಗ ಮೃತಪಟ್ಟಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .