6:13 AM Sunday12 - October 2025
ಬ್ರೇಕಿಂಗ್ ನ್ಯೂಸ್
ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ…

ಇತ್ತೀಚಿನ ಸುದ್ದಿ

ಸೋಮವಾರಪೇಟೆ: ಗಣತಿ ಸಮೀಕ್ಷೆ ವಿಳಂಬ ನೆಪವೊಡ್ಡಿ ಶಿಕ್ಷಕರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಪ್ರತಿಭಟನೆ

06/10/2025, 19:48

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnata@gmail.com

ಸಾಮಾಜಿಕ ,ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ: 2025 ಯ
ಗಣತಿ ಸಮೀಕ್ಷಾ ಕಾರ್ಯವು ತಾಂತ್ರಿಕ ದೋಷಗಳಿಂದ ವಿಳಂಬವಾಗಿದ್ದರೂ,ವಿನಾಃ ಕಾರಣ ನೀಡಿ ನಿಯೋಜನೆಗೊಂಡಿರುವ ಶಿಕ್ಷಕರಿಗೆ ನೀಡಿರುವ ನೋಟಿಸ್ ಅನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಶಿಕ್ಷಕರು ಸೋಮವಾರಪೇಟೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ( ಬಿಇಓ ಕಛೇರಿ ) ಎದುರು ಪ್ರತಿಭಟನೆ ನಡೆಸಿ ಸುಲಲಿತ ಗಣತಿ ಕಾರ್ಯಕ್ಕೆ ಅನುವು ಮಾಡಿ ಕೊಡುವಂತೆ ಅಗ್ರಹಿಸಿದರು.

ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘಗಳ
ವತಿಯಿಂದ ಬಿಇಓ ಕಛೇರಿ ಜಮಾಯಿಸಿದ
ನಡೆದ ಶಿಕ್ಷಕರು ಜಿಲ್ಲಾಡಳಿತದ ಒತ್ತಡಕ್ಕೆ ಮಣಿದು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಬಿಇಓ ರವರು ಗಣತಿ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕಿನ 175 ಕ್ಕೂ ಹೆಚ್ಚಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ನೋಟಿಸ್ ಗಳನ್ನು ನೀಡಿರುವ ಕ್ರಮ ಸರಿಯಲ್ಲ. ಶಿಕ್ಷಕರಿಗೆ ನೀಡಿರುವ ನೋಟಿಸ್ ಅನ್ನು ತಕ್ಷಣದಲ್ಲೇ ಹಿಂಪಡೆದರೆ
ತಾವುಗಳು ಗಣತಿ ಸಮೀಕ್ಷೆಯನ್ನು ಮುಂದುವರೆಸುವುದಾಗಿ ಪಟ್ಟು ಹಿಡಿದರು. ಗಣತಿದಾರ ಶಿಕ್ಷಕರಿಗೆ ನೀಡಿರುವ ನೋಟಿಸ್ ಅನ್ನು ಹಿಂದಕ್ಕೆ ಪಡೆಯುವುದು ಸೇರಿದಂತೆ
ಗಣತಿ ಕಾರ್ಯವನ್ನು ಕೆಲದಿನಗಳ ಕಾಲ ಮುಂದೂಡುವಂತೆ ಹಾಗೂ ಗಣತಿ ಕಾರ್ಯದ ನೆಪವೊಡ್ಡಿ ಶಿಕ್ಷಕರಿಗೆ ಅನಾವಶ್ಯಕವಾಗಿ
ನೀಡಿರುವ ನೋಟಿಸ್ ಗಳನ್ನು ಹಿಂದಕ್ಕೆ ಪಡೆದು ಗಣತಿದಾರರು ಸಮೀಕ್ಷಾ ಸ್ಥಳದಲ್ಲಿ ನೈಜವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಗಣತಿ ಕಾರ್ಯವನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕೃಷ್ಣಮೂರ್ತಿ ಹಾಗೂ ಬಿಇಓ ಎಂ.ಕೃಷ್ಣಪ್ಪ ಅವರಿಗೆ
ಮನವಿ ಸಲ್ಲಿಸಿದ ಶಿಕ್ಷಕರ ಸಂಘಗಳ ಪದಾಧಿಕಾರಿಗಳು ಈ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವಂತೆ ಮನವಿ ಮಾಡಿದರು.
ಗಣತಿ ಆರಂಭದ ಮೊದಲ ಐದು ದಿನಗಳ ಕಾಲ ಆ್ಯಪ್ ಮತ್ತು ತಾಂತ್ರಿಕ ಸಮಸ್ಯೆಗಳಿಂದ ಗಣತಿ ಕಾರ್ಯ ತಡವಾಗಿ ಆರಂಭವಾಗಿದ್ದು ಮತ್ತು ಯು.ಎಚ್.ಐ.ಡಿ.(UHID) ಸ್ಟಿಕ್ಕರ್ ಅಂಟಿಸಿರುವ
ಮನೆಗಳು ಗಣತಿದಾರರಿಗೆ ಸಿಗದಿರುವ ಕಾರಣ ಗಣತಿ ಕಾರ್ಯ ವಿಳಂಬವಾಗಿದೆ ಹೊರತು ಇದಕ್ಕೆ ಗಣತಿದಾರ ಶಿಕ್ಷಕರು ಕಾರಣವಲ್ಲ. ಗಣತಿ ಕಾರ್ಯ ವಿಳಂಬವಾಗಿದೆ ಎಂದು ಶಿಕ್ಷಕರು ತಿಳಿಸಿದರು.ಗಣತಿದಾರ ಶಿಕ್ಷಕರಿಗೆ ನಿಗದಿಪಡಿಸಿರುವ ಯು.ಎಚ್.ಐ.ಡಿ.(UHID)
ಸ್ಟಿಕ್ಕರ್ ಅಂಟಿಸಿರುವ
ಮನೆಗಳು ಸಿಗದೇ ಗಣತಿ ಕಾರ್ಯಕ್ಕೆ ತೊಂದರೆಯಾಗಿದೆ.
ದಸರಾ ರಜಾವಧಿಯಲ್ಲಿ
ಗಣತಿದಾರರಾದ ನಾವುಗಳು
ಬಿಸಿಲು ಮಳೆಯೆನ್ನೆದೆ ಬೆಳಿಗ್ಗೆ 6.30-7.00 ಗಂಟೆಯಿಂದ
ರಾತ್ರಿ 10.00 ಗಂಟೆ ತನಕ
ಮನೆ ಮನೆ ಅಲೆದು ಗಣತಿ ಸಮೀಕ್ಷೆ
ಮಾಡುತ್ತಿದ್ದೇವೆ. ನಾವುಗಳು ಗಣತಿ ಕಾರ್ಯಕ್ಕೆ ಹಿಂದೇಟು ಹಾಕುವುದಿಲ್ಲ. ನಮಗೆ ಗಣತಿ ಮನೆಗಳೇ ಸಿಗದಿರುವಾಗ ನಾವುಗಳು ಗಣತಿ ಸಮೀಕ್ಷೆಯನ್ನು ಹೇಗೆ ಪೂರ್ಣಗೊಳಿಸಲು ಸಾಧ್ಯ ಎಂದು ಗಣತಿದಾರ ಶಿಕ್ಷಕರು ಪ್ರಶ್ನಿಸಿದರು.
ಗಣತಿದಾರರ ನೈಜ ಸಮಸ್ಯೆಗಳನ್ನು ಅರಿಯಲು ಜಿಲ್ಲಾ ಹಾಗೂ ತಾಲ್ಲೂಕು ಹಂತದ ಅಧಿಕಾರಿಗಳು
ಸಮೀಕ್ಷಾ ಸ್ಥಳಕ್ಕೆ ಭೇಟಿ ನೀಡಬೇಕು. ಸಮೀಕ್ಷೆ ವೇಳೆಯಲ್ಲಿ ಮನೆಗಳು ಸಿಗದೇ ಪರದಾಡುತ್ತಿರುವ ಗಣತಿದಾರರ ಸಮಸ್ಯೆಗಳನ್ನು ಪರಿಹರಿಸಲು
ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ಗಳು ಖುದ್ದು ಸ್ಥಳಕ್ಕೆ ಧಾವಿಸಿದರೆ ಮಾತ್ರ ಸಮೀಕ್ಷೆಯ ತಾಂತ್ರಿಕ ತೊಂದರೆಗಳ ಸತ್ಯಾಂಶವನ್ನು ತಿಳಿಯಲು ಸಾಧ್ಯ ಎಂದು ಗಣತಿದಾರರು ತಮ್ಮ ಅಹವಾಲನ್ನು ಹೇಳಿಕೊಂಡರು.
ಗಣತಿ ಸಮೀಕ್ಷೆಯಲ್ಲಿ ಶೇಕಡಾ 25-30ರಷ್ಟು ವಸತಿ ರಹಿತ ಖಾಲಿ ಮನೆಗಳು ಸೇರಿದಂತೆ ವಾಣಿಜ್ಯ ಮಳಿಗೆಗಳು, ಅಂಗಡಿ ಮುಗ್ಗಟ್ಟು ಇತ್ಯಾದಿ ಕಟ್ಟಡಗಳಿದ್ದರೂ ಅವುಗಳಿಗೂ ಯು.ಎಚ್.ಐ.ಡಿ.ಸ್ಟಿಕ್ಕ ರ್ಸ್ ಗಳನ್ನು ಅಂಟಿಸಿರುವುದರಿಂದ ಖಾಲಿ ಮನೆಗಳ ಸಂಖ್ಯೆಯೇ ಹೆಚ್ಚಾಗಿ ಕಂಡುಬಂದರೂ ಅವುಗಳನ್ನು ಸಮೀಕ್ಷೆಗೆ ನಿಗದಿಪಡಿಸಿರುವ ಪಟ್ಟಿಯಿಂದ ಕೈ ಬಿಟ್ಟರೆ ಮಾತ್ರ ಸಮೀಕ್ಷೆಯ ನೈಜವಾದ ಕುಟುಂಬಗಳ ಸಂಖ್ಯೆ ಸಿಗಲಿದೆ. ಕೆಲವು ಕಡೆ ಬೇರೆ ಊರಿನಲ್ಲಿ ಮಾಹಿತಿ ನೀಡಿದವರು ಮತ್ತು ಸಮೀಕ್ಷೆಯನ್ನು ನಿರಾಕರಣೆ ಮಾಡಿರುವ ಈ ಎಲ್ಲಾ ದತ್ತಾಂಶವನ್ನು ಪರಿಗಣಿಸಿದರೆ ಜಿಲ್ಲೆಯ ಸಮೀಕ್ಷೆಯ ನೈಜ ಚಿತ್ರಣ ಸಿಗಲಿದೆ. ಆದ್ದರಿಂದ, ಗಣತಿ ಸಮೀಕ್ಷೆಯನ್ನು ಮುಂದುವರೆಸಲು
ಗಣತಿ ಮನೆಗಳನ್ನು ಹುಡುಕಿಕೊಡಲು ತಮಗೆ ಸ್ಥಳೀಯ
ಮಟ್ಟದಲ್ಲಿ ಸಂಬಂಧಿಸಿದ ಸಿಬ್ಬಂದಿಗಳನ್ನು ನೇಮಿಸಿಕೊಡಬೇಕು ಎಂದು
ಮನವಿ ಮಾಡಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕೃಷ್ಣಮೂರ್ತಿ ಅವರು, ಸಮೀಕ್ಷೆಗೆ ಬಾಕಿ ಇರುವ ಮನೆಗಳ ಸಮೀಕ್ಷೆಗೆ ಅಗತ್ಯ ಸಿಬ್ಬಂದಿ ಒದಗಿಸಲಾಗುವುದು. ಈ ಸಮೀಕ್ಷೆಯನ್ನು ಪೂರ್ಣಗೊಳಿಸಲು ಶಿಕ್ಷಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಕರಿಗೆ ಈಗಾಗಲೇ ಕಾರಣ ಕೇಳಿ ನೀಡಿರುವ ನೋಟಿಸ್ ಗಳನ್ನು ಹಿಂದಕ್ಕೆ ಪಡೆಯುವುದಾಗಿ ಬಿಇಓ ಎಂ.ಕೃಷ್ಣಪ್ಪ ತಿಳಿಸಿದರು.
ಗಣತಿದಾರರ ಶಿಕ್ಷಕರು ತಮ್ಮನ್ನು ನಿರಂತರವಾಗಿ ಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೂ ಹಾಗೂ ಈಗಾಗಲೇ ಗಣತಿ ಕಾರ್ಯವನ್ನು ಬಹುತೇಕ ಪೂರ್ಣಗೊಳಿಸಿರುವ ಮತ್ತು ಶೇಕಡಾ 80-90% ಪೂರೈಸಿದ ಗಣತಿದಾರರಿಗೆ ಕಾರಣ ಕೇಳಿ 175 ಮಂದಿಗೆ ಕಾರಣ ಕೇಳಿ ನೋಟಿಸ್ ನೀಡಿರುವುದು ಶಿಕ್ಷಕರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಿ ಅವರನ್ನು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಾಡಿದಂತಾಗುತ್ತದೆ ಎಂದು ಶಿಕ್ಷಕರು ತಮ್ಮ ಅಳಲನ್ನು ತೋಡಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು